ಬೀದರ್: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ: ಅಬ್ದುಲ್ ರಹಿಮಾನ್ ತಲಪಾಡಿ ಗೆ ಪ್ರಶಸ್ತಿ ಪ್ರಧಾನ
ಬೀದರ್: (ಕೆಯುಡಬ್ಲೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ವಾರ್ತಾಭಾರತಿಯ ಯೋಗೇಶ್ ಮಲ್ಲೂರು (ಅತ್ಯುತ್ತಮ ಗ್ರಾಮಾಂತರ ವರದಿ) ಮತ್ತು ಅಬ್ದುಲ್ ರಹಿಮಾನ್ ತಲಪಾಡಿ (ರೈತರ ಬದುಕು-ಬವಣೆ) ಅವರಿಗೆ ಪ್ರಶಸ್ತಿ ಲಭಿಸಿದೆ.
ನಗರದ ಜನವಾಡ ರಸ್ತೆಯ ಝೀರಾ ಕನ್ವೆನ್ನನ್ ಹಾಲ್ ನಲ್ಲಿ ರವಿವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಸಚಿವ ಈಶ್ವರ್ ಖಂಡ್ರೆ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.




