April 14, 2026

ಸವಾಲುಗಳ ನಡುವೆ ಶ್ರೇಷ್ಠ ಸಾಧನೆಗೈದ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ

0
IMG-20260413-WA0012.jpg

ಬಂಟ್ವಾಳ: ಅನೇಕ ಸವಾಲುಗಳು ಜೀವನದಲ್ಲಿ ಎದುರಾಗಬಹುದು. ಆದರೆ ದೃಢ ಮನೋಬಲ ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ಅಡೆತಡೆಗಳನ್ನೂ ಮೀರಿ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕೆ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ನೇರಳಕಟ್ಟೆಯ, ಕುll ಫಾತಿಮಾ ತಸ್ಮೀನ್ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಜನಾಬ್ ಉಮರ್ ಮದನಿ ಮತ್ತು ಶ್ರೀಮತಿ ಉಮೈರ ದಂಪತಿಗಳ ನಾಲ್ಕನೇ ಪುತ್ರಿಯಾದ ಕುll ಫಾತಿಮಾ ತಸ್ಮೀನ್ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 512 ಅಂಕಗಳನ್ನು ಗಳಿಸಿ, ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ತಮ್ಮ ಅನನ್ಯ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ವಿಶೇಷವಾಗಿ, ಅವರು ವಾರಕ್ಕೆರಡು ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದರೂ ಕೂಡ ಕಲಿಕೆಯ ಮೇಲಿರುವ ಅಭಿರುಚಿಯಿಂದ ತಮ್ಮ ವಿದ್ಯಾಭ್ಯಾಸವನ್ನು ನಿರಂತರವಾಗಿ ಮುಂದುವರಿಸಿ ಈ ಸಾಧನೆಯನ್ನು ಮಾಡಿರುವುದು ಅತ್ಯಂತ ಪ್ರಶಂಸನೀಯವಾಗಿದೆ.

ವಿದ್ಯಾರ್ಥಿನಿಯ ಈ ಸಾಧನೆಯನ್ನು ಮೆಚ್ಚಿ, ಕಾಲೇಜಿನ ಪರವಾಗಿ ಕಲಾ ವಿಭಾಗದ ಉಪನ್ಯಾಸಕರು ಅವರ ನಿವಾಸಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅವರ ಪರಿಶ್ರಮ, ಸಂಕಲ್ಪ ಮತ್ತು ಸಾಧನೆಗೆ ಎಲ್ಲರೂ ಅಭಿನಂದನೆಗಳನ್ನು ತಿಳಿಸಿದರು.

ಕುll ಫಾತಿಮಾ ತಸ್ಮೀನ್ ಅವರ ಈ ಯಶೋಗಾಥೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಏನೇ ಸಮಸ್ಯೆಗಳಿದ್ದರೂ ಸಹ ಮನಸ್ಸಿನ ಶಕ್ತಿ ಮತ್ತು ಧೈರ್ಯದಿಂದ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂಬ ಸಂದೇಶವನ್ನು ವಿದ್ಯಾರ್ಥಿನಿಯು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!