April 12, 2026

ವಿಟ್ಲ: ಮನೆ ಮುಂದೆ ಆಟ ಆಡುತ್ತಿದ್ದ ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿ: ಬೈಕ್ ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆ

0
84aa3a2442bc4e53b7bb89dca38b7f6a

ವಿಟ್ಲ: ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಾಡಹಗಲೇ ಬೈಕಿನಲ್ಲಿ ಬಂದು ಕಸಿದು ಪರಾರಿಯಾಗಿದ್ದು ಪರಿಸರದ ಜನತೆಗೆ ಭಯದ ವಾತಾವರಣ ಉಂಟಾಗಿದೆ. ಈ ಹಿಂದೆಯೂ ಹಲವು ಬಾರಿ ಈ ಪರಿಸರದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ, ಅಡಿಕೆ, ಗ್ಯಾಸ್ ಸಿಲಿಂಡರ್ ಮುಂತಾದವುಗಳನ್ನು ಕಳವು ಮಾಡಲಾಗಿತ್ತು.

ಇಂದು ಸರ ಕಳವು ಮಾಡಿ ಪರಾರಿಯಾಗುತ್ತಿರುವ ದೃಶ್ಯ ಪಂಚಮಿ ಸೂಪರ್ ಮಾರ್ಕೆಟ್ ನ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ವಿಟ್ಲ ಪೊಲೀಸರು ತಕ್ಷಣ ಕಳ್ಳತನ ಮಾಡಿದ ಖದೀಮನನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಂಡು ಜನರಿಗೆ ಭಯ ರಹಿತ ಜೀವನ ನಡೆಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸುತ್ತೇನೆ.

ಸಿರಾಜ್ ಮದಕ

Leave a Reply

Your email address will not be published. Required fields are marked *

You may have missed

error: Content is protected !!