ಬಂಟ್ವಾಳ: ಮಾದಕ ವಸ್ತುಗಳ ಮಾರಾಟ: ಆರೋಪಿ ಆರೀಫ್ ಬೋಳಿಯಾರ್ ಬಂಧನ
ಬಂಟ್ವಾಳ: ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೋಳಿಯಾರ್ ನಿವಾಸಿ ಮಹಮ್ಮದ್ ಆರೀಫ್ ಎಂಬಾತನನ್ನು ದೇರಳಕಟ್ಟೆ ಬಳಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಎದುರುಗಡೆ ಮೈದಾನದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ಮಾಡುವ ಖಚಿತ ಮಾಹಿತಿ ಪಡೆದುಕೊಂಡ ಕೊಣಾಜೆ ಎಸ್ ಐ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




