April 3, 2026

ಕನ್ನಡದ ಸಾಮರಸ್ಯದ ನೆಲೆಗಳು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಂದ  ಭವ್ಯ ಲೋಕಾರ್ಪಣೆ – ಮಂಗಳೂರಿನಲ್ಲಿ ಪೂರ್ವ ಸಿದ್ಧತಾ ಸಭೆ ಯಶಸ್ವಿ

0
image_editor_output_image2062763785-1775150505522

ದಿನಾಂಕ 13/04/2026ರಂದು ಕರ್ನಾಟಕದ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಕನ್ನಡದ ಸಾಮರಸ್ಯದ ನೆಲೆಗಳು” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗುತ್ತಿರುವ ಮಹತ್ವದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ವಿಧಾನಸೌಧದ  ಬ್ಯಾಂಕ್ವೆಟ್ ಹಾಲ್‌ನಲ್ಲಿ ಭವ್ಯವಾಗಿ ನಡೆಯಲಿದೆ. ಈ ಪುಸ್ತಕಗಳು ಕರ್ನಾಟಕದ ಸಾಮರಸ್ಯ ಸಂಸ್ಕೃತಿ, ಬಹುಮುಖ ಪರಂಪರೆ ಹಾಗೂ ವೈವಿಧ್ಯತೆಯೊಳಗಿನ ಏಕತೆಯನ್ನು ಪ್ರತಿಬಿಂಬಿಸುವ ಅಮೂಲ್ಯ ಕೃತಿಗಳಾಗಿವೆ.

ಈ ಮಹತ್ವದ ಕಾರ್ಯಕ್ರಮದ ಸಿದ್ಧತೆಗಳ ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯು ಪ್ರಾಧಿಕಾರದ ಅಧ್ಯಕ್ಷರಾದ ಡಾ‌. ಪುರುಷೋತ್ತಮ ಬಿಳಿನೆಲೆ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸದಸ್ಯರೊಂದಿಗೆ ಭಾಗವಹಿಸಿ, ಕಾರ್ಯಕ್ರಮದ ರೂಪುರೇಷೆಗಳು, ಪುಸ್ತಕಗಳ ಮಹತ್ವ ಹಾಗೂ ಜನಸಾಮಾನ್ಯರಿಗೆ ತಲುಪಿಸುವ ವಿಧಾನಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಸಮಿತಿ ಸದಸ್ಯರಾದ ಡಾ. ರಾಜೇಶ್ ಕದ್ರಿ ಶ್ರೀ ದಿವಾಕರ ದಾಸ್ ಕಾವಲಕಟ್ಟೆ,ದೇವಿಪ್ರಸಾದ್ ಬೆಳ್ತಂಗಡಿ,ಹಸೈನಾರ್ ತಾಳಿತ್ತನೂಜಿ ಕೊಳ್ನಾಡು,ರಹ್ಮಾನ್ ಖಾನ್ ಕುಂಜತ್ತಬೈಲ್,ಯು.ಎಚ್.ಖಾಲಿದ್ ಉಜಿರೆ,ಶ್ರೀಮತಿ ಸುಜಾತ ದೀಪಕ್,ಶ್ರೀಮತಿ ಶಾಂತ ಎಸ್.ರಾವ್ ಉಪಸ್ಥಿತರಿದ್ದರು.ಕನ್ನಡ ಸಂಸ್ಕೃತಿ ಇಲಾಖೆಯ ರಾಜೇಶ್ ಸ್ವಾಗತಿಸಿ,ದಿವಾಕರ ದಾಸ್ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!