April 2, 2026

ಪರಂಗಿಪೇಟೆ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಹೊಡೆದು ಕಾರು ಪಲ್ಟಿ: ಚಾಲಕ ಸಹಿತ ಆರು ಮಂದಿ ಗಾಯ

0
image_editor_output_image1693169040-1775109330312.jpg

ಬಂಟ್ವಾಳ : ಚಾಲಕನ ನಿಯಂತ್ರಣ ಕಳೆದು ರಸ್ತೆ ಡಿವೈಡರ್ ಗೆ ಹೊಡೆದು ಕಾರೊಂದು ಪಲ್ಟಿಯಾಗಿ ಚಾಲಕ ಸಹಿತ ಆರು ಮಂದಿ ಗಾಯಗೊಂಡ ಘಟನೆ ಬಿಸಿರೋಡಿನ ರಾಮಲ್ ಕಟ್ಟೆ ಎಂಬಲ್ಲಿ ಬುಧವಾರ ಮಧ್ಯ ರಾತ್ರಿ ನಡೆದಿದೆ.ಗಾಯಗೊಂಡ ಎಲ್ಲರೂ ಕೂಡ ವಳಚ್ಚಿಲ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳಾದ ವಿನಯ್,ಹೇಮಂತ್, ಸುಜನ್‌, ದೀಕ್ಷಾರಾಜ್, ಜೈಸನ್, ರಕ್ಷಾಸಾಮ್ರಟ್ ಗಾಯಗೊಂಡವರು.ಇವರು ಸುಮಾರು 12 ಗಂಟೆ ರಾತ್ರಿಗೆ ಕಾಲೇಜಿನಿಂದ ಬಿಸಿರೋಡು ಕಡೆಗೆ ಚಹಾ ಕುಡಿಯುವ ಸಲುವಾಗಿ ಬಂದಿದ್ದರು ಎನ್ನಲಾಗಿದೆ.ಅ ವೇಳೆ ರಾಮಲ್ ಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದು ಹೆದ್ದಾರಿಯ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಆದರ್ಶ್ ಬೇಟಿ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!