May 17, 2026

ವಿಟ್ಲ ಜಾತ್ರಾ ಸಂತೆ ಏಲಂನಲ್ಲಿ ಭಾರೀ ಅವ್ಯವಹಾರ ನಡೆಸಿದ ಟೆಂಡರ್ ದಾರ ಮಹೇಶ್ ದಾಸ್…!: ಪಟ್ಟಣ ಪಂಚಾಯತ್ ನ ಸೂಚನೆಯಂತೆ ದಾಖಲೆ ಒದಗಿಸಿದ ದೂರುದಾರರು

0
IMG-20260331-WA0105

ವಿಟ್ಲ ಜಾತ್ರಾ ಮಹೋತ್ಸವದ ಸಂದರ್ಭ ಟೆಂಡರ್‌ ವಿಜೇತ ಮಹೇಶ್ ದಾಸ್ ಎಂಬಾತ ಭಾರೀ ಅವ್ಯವಹಾರ ಮಾಡಿರುವ ಬಗ್ಗೆ ಬಡ ವ್ಯಾಪಾರಿಗಳು ಪ್ರತ್ಯೇಕವಾಗಿ ಪಟ್ಟಣ ಪಂಚಾಯತ್‌ಗೆ ನೀಡಿದ್ದರು. ಇದೀಗ ಈ ಬಗ್ಗೆ ಟೆಂಡರ್‌ ವಿಜೇತ ಮಹೇಶ್‌ ದಾಸ್ ವಿರುದ್ಧ ಬಡ ವ್ಯಾಪಾರಿಗಳು ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ಜನವರಿ 14 ರಿಂದ 22 ರ ತನಕ ವಿಟ್ಲ ಜಾತ್ರೆಯ ಸಂದರ್ಭದಲ್ಲಿ ಟೆಂಡರ್ ವಿಜೇತ ಮಹೇಶ್ ದಾಸ್ ಅವ್ಯವಹಾರ ಮಾಡಿರುವ ಬಗ್ಗೆ ಈ ಮೊದಲೇ ಬಡ ವ್ಯಾಪಾರಿಗಳು ಪಟ್ಟಣ ಪಂಚಾಯತ್‌ಗೆ ದೂರು ನೀಡಿದ್ದರು. ಈ ದೂರಿಗೆ ಬೇಕಾದ ಎಲ್ಲಾ ಸಾಕ್ಷ್ಯಾಧಾರಗಳನ್ನು ನೀಡಲಾಗಿತ್ತು. ಈ ವಿಚಾರವಾಗಿ ಪಟ್ಟಣ ಪಂಚಾಯತ್‌ ವಿಚಾರಣೆಗಾಗಿ ದೂರುದಾರರು ಬಡ ವ್ಯಾಪಾರಿಗಳಿಗೆ ನೋಟಿಸ್ ಹಾಗೂ ಫೋನ್ ಕರೆಗಳ ಮೂಲಕ ತಿಳಿಸಿದ್ದು, ಪಟ್ಟಣ ಪಂಚಾಯತ್‌ನ ಎಲ್ಲಾ ಕರೆಗಳಿಗೆ ದೂರುದಾರರು ಸ್ಪಂದಿಸಿದ್ದು, ಟೆಂಡರ್‌ ವಿಜೇತ ಪಟ್ಟಣ ಪಂಚಾಯತ್‌ನ ಯಾವುದೇ ಕರೆಗಳಿಗೆ ಸ್ಪಂದಿಸದೆ ಇರುವುದು ಆತನ ಅವ್ಯವಹಾರದ ಕೆಲಸಕ್ಕೆ ಇನ್ನಷ್ಟು ಪುರಾವೆ ಸಿಕ್ಕಂತಾಗಿದೆ.

ಅಲ್ಲದೇ, ನೋಟಿಸ್‌ನಲ್ಲಿ ಇರುವ ಪ್ರಕಾರ ನೀವು ನಿಗಧಿ ಪಡಿಸಿದ ದಿನಾಂಕದಂದು ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ದೃಢಪಡಿಸಿದ್ದು, ಏಲಂನಲ್ಲಿ ಭಾಗಿಯಾದ ಎಲ್ಲಾ ಟೆಂಡರ್‍ ದಾರರು ಪಟ್ಟಣ ಪಂಚಾಯತ್‌ನ ನೀತಿ ನಿಯಮಗಳನ್ನು ಪಾಲಿಸಿದ್ದಾರೆ.  ಆದರೆ  ಟೆಂಡರ್‌ ವಿಜೇತ ಮಹೇಶ್‌ ದಾಸ್ ಎಂಬಾತ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದು, ದೂರುದಾರರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮತ್ತೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ಬಡ ವ್ಯಾಪಾರಿಗಳು ದೂರಿನ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ.

ಈ ಬಗ್ಗೆ 31/03/2026 ರಂದು ನಡೆದ ಪಟ್ಟಣ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಪಟ್ಟಣ ಪಂಚಾಯತ್‌ ಅಧ್ಯಕ್ಷರನ್ನು , ಪಟ್ಟಣ ಪಂಚಾಯತ್‌ ಅಧಿಕಾರಿಯನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನಾದರೂ ಬಡ ವ್ಯಾಪಾರಿ ದೂರುದಾರರಿಗೆ ನ್ಯಾಯ ಸಿಗುತ್ತಾ, ? ಟೆಂಡರ್‍ ವಿಜೇತ ಮಹೇಶ್‌ ದಾಸ್‌ನನ್ನು ಕಪ್ಪು ಪಟ್ಟಿಯಲ್ಲಿ ಹಾಕುತ್ತಾರಾ? ಎಂದು ಕಾದು ನೋಡಬೇಕಿದೆ. ವಿಟ್ಲ ಜಾತ್ರೆಯ ಸಂದರ್ಭದಲ್ಲಿ ನಡೆದ ಈ ಅವ್ಯವಹಾರ ಇಡೀ ವಿಟ್ಲದ ಜನತೆ ನಾಚಿಕೆಪಡುವಂತಾಗಿದೆ ಎಂದು ಸಾರ್ವಜನಿಕರು ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!