May 16, 2026

ಕೊರಿಂಗಿಲ ಮದ್ರಸದಲ್ಲಿ ಮಿಹ್ರಜಾನುಲ್ ಬಿದಾಯ ಮದ್ರಸ ಪ್ರಾರಂಭೋತ್ಸವ

0
IMG-20260329-WA0040

ಪುತ್ತೂರು : ಮಿಸ್ಬಾಹುಲ್ ಹುದಾ ಮದ್ರಸ ಕೊರಿಂಗಿಲ ಇಲ್ಲಿ ಈ ವರ್ಷದ (2026) ಮದ್ರಸ ಅಧ್ಯಯನ ಪ್ರಾರಂಭೋತ್ಸವವು ಬಹಳ ಅದ್ದೂರಿಯಾಗಿ ನಡೆಯಿತು.

1 ನೇ ತರಗತಿಗೆ ಸೇರ್ಪಡೆಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಬಲೂನ್, ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು.

ಧಾರ್ಮಿಕ ಶಿಕ್ಷಣದಲ್ಲಿ  ಸ್ವಫಾಹಿ ಬಿರುದು ಪಡೆದ ಕೀಲಂಪಾಡಿ ನಿಜಾರ್ ಸ್ವಫಾಹಿ ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಖತೀಬರಾದ ಬಹು| ಅಯ್ಯೂಬ್ ವಹಬಿ ಉಸ್ತಾದರು ಮದ್ರಸ ಶಿಕ್ಷಣದ ಅಗತ್ಯತೆ, ಮಹತ್ವಗಳನ್ನು ವಿವರಿಸುತ್ತ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು. ಸಹ ಅಧ್ಯಾಪಕರಾದ ಅಬೂಬಕ್ಕರ್ ಮದನಿ ಉಸ್ತಾದರು ಪ್ರಾಸ್ಥಾವಿಕವಾಗಿ ಮಾತನಾಡಿದರು.

  ಕಾರ್ಯಕ್ರಮದಲ್ಲಿ ಜಮಾತ್ ಕಮಿಟಿ ಪದಾಧಿಕಾರಿಗಳು, ಅಶ್ಬಾಲುಲ್ ಇಸ್ಲಾಮ್ ವೆಲ್ಫೇರ್ ಸಮಿತಿಯವರು, MISA ಸಮಿತಿಯವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!