ಹುಲಿಕಲ್ ಘಾಟ್: ಖಾಸಗಿ ಬಸ್ ಬೆಂಕಿಗಾಹುತಿ
ಹೊಸನಗರ: ಖಾಸಗಿ ಬಸ್ ವೊಂದು ಆಕಸ್ಮಿಕ ಬೆಂಕಿಗಾಹುತಿಯಾದ ಘಟನೆ ಹುಲಿಕಲ್ ಘಾಟ್ ದೇವಸ್ಥಾನ ಮತ್ತು ಬಾಳೆಬರೆ ಫಾಲ್ಸ್ ನಡುವೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಸಾಗುತ್ತಿದ್ದ ಖಾಸಗಿ ಬಸ್‌ನ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸುತ್ತಲೇ ಬಸ್ ಅನ್ನು ರಸ್ತೆಯ ಬದಿಗೆ ನಿಲ್ಲಿಸಿ ಅದರಲ್ಲಿದ್ದ 38 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಬೆಂಕಿ ವೇಗವಾಗಿ ಹಬ್ಬಿದ ಕಾರಣ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದು ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.




