ಅಮೆರಿಕ, ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ: 200ಕ್ಕೂ ಹೆಚ್ಚು ಜನರು ಮೃತ್ಯು, 747 ಮಂದಿ ಗಾಯ
ಟೆಹರಾನ್: :ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 747 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಸಂಸ್ಥೆ ವರದಿ ಮಾಡಿದೆ.
ಇರಾನ್‌ನ 31 ಪ್ರಾಂತ್ಯಗಳಲ್ಲಿ 24 ಪ್ರದೇಶಗಳು ದಾಳಿಗೆ ತುತ್ತಾಗಿವೆ ಎಂದು ರೆಡ್ ಕ್ರೆಸೆಂಟ್ ವರದಿಯನ್ನು ಉಲ್ಲೇಖಿಸಿ ಐಎಎನ್‌ಎ ಸುದ್ದಿ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಅಮೆರಿಕ-ಇಸ್ರೇಲ್ ಸೇನಾ ದಾಳಿಗೆ ಸಂಬಂಧಿಸಿದಂತೆ ಇರಾನ್‌ನ ಅಧಿಕೃತ ಪ್ರಕಟಣೆ ಇದಾಗಿದೆ.
ದಕ್ಷಿಣ ಇರಾನ್‌ನ ಹೊರ್ಮ್‌ಜ್‌ಗನ್ ಪ್ರಾಂತ್ಯದ ಮಿನಾಬ್ ಪಟ್ಟಣದಲ್ಲಿರುವ ಶಾಲೆಯನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಸೇನಾ ದಾಳಿಯಲ್ಲಿ ಮಕ್ಕಳು ಸೇರಿದಂತೆ 85 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಇರಾನ್ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಹತಾಮಿ ಕೂಡ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ನ ಮಾಧ್ಯಮಗಳು ವರದಿ ಮಾಡಿವೆ.




