March 2, 2026

ಬೆಳ್ತಂಗಡಿ: ಪಟ್ಟಣ ಪಂಚಾಯತ್ ನೌಕರನ ಮೇಲೆ ಹೆಜ್ಜೇನು ದಾಳಿ

0
image_editor_output_image1171252998-1772322032991.jpg

ಬೆಳ್ತಂಗಡಿ: ನಗರದ ಕೋರ್ಟ್ ಅವರಣದಲ್ಲಿರುವ ಪಂಚಾಯತ್ ನೀರಿನ ಟ್ಯಾಂಕ್ ಮೀಟರ್ ಸರಿಪಡಿಸುವ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನೀರಿನ ನೌಕರ ರೊನಾಲ್ಡ್ ಸಂಜಯನಗರ ಎಂಬವರ ಮೇಲೆ ಹೆಜ್ಜೇನು ದಾಳಿ ನಡೆದಿದ್ದು ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತರಾದ ಮುಳುಗು ತಜ್ಞ ಇಸ್ಮಾಯಿಲ್ ಸಂಜಯನಗರ ಅವರು ಕೂಡಲೇ ರಕ್ಷಣಾ ಕಾರ್ಯಕ್ಕೆ ಧಾವಿಸಿ ಹೆಜ್ಜೇನನ್ನು ಓಡಿಸಿ ನೌಕರನನ್ನು ನೀರಿನ ಟ್ಯಾಂಕಿನ ಮೇಲಿಂದ ಕೆಳಗಿಳಿಸಿ ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡಿರುವ ನೌಕರ ರೊನಾಲ್ಡ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!