April 16, 2026

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಬಹ್ರೇನ್, ಕುವೈತ್, ಅಬುಧಾಬಿಯಲ್ಲಿರುವ ಅಮೆರಿಕಾದ ನೌಕಾಪಡೆ ನೆಲೆ ಮೇಲೆ ಇರಾನ್ ಪ್ರತಿದಾಳಿ

0
image_editor_output_image302067768-1772272081823.jpg

ಬಹ್ರೇನ್ : ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಬೆನ್ನಲ್ಲೆ ಬಹ್ರೇನ್, ಕುವೈತ್, ಅಬುಧಾಬಿಯಲ್ಲಿ ಸ್ಫೋಟಗಳು ಸಂಭವಿಸಿದೆ.

ಬಹ್ರೇನ್‌ನ ಆಂತರಿಕ ಸಚಿವಾಲಯ ತುರ್ತು ಎಚ್ಚರಿಕೆಯನ್ನು ನೀಡಿದೆ. ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆಯನ್ನು ನೀಡಿದೆ.

ಬಹ್ರೇನ್‌ನ ಜುಫೈರ್ ಪ್ರದೇಶದಲ್ಲಿರುವ ಯುಎಸ್ ನೌಕಾಪಡೆ ನೆಲೆಯಿಂದ ಹೊಗೆ ಕಾಣಿಸಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯುಎಸ್ ನೌಕಾಪಡೆಯ 5ನೇ ಪ್ರಧಾನ ಕಚೇರಿಯನ್ನು ಕ್ಷಿಪಣಿ ದಾಳಿಗೆ ಗುರಿಪಡಿಸಲಾಗಿದೆ ಎಂದು ಬಹ್ರೇನ್ ದೃಢಪಡಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕುವೈತ್‌ನಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ. ಸೈರನ್‌ಗಳು ಸಕ್ರಿಯಗೊಂಡಿವೆ ಎಂದು ವರದಿಯು ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!