April 16, 2026

ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಇರಾನ್‌ ನಿಂದ ಕ್ಷಿಪಣಿ ದಾಳಿ

0
images.jpeg

ಟೆಲ್‌ ಅವೀವ್: ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಇರಾನ್‌, ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ ದಾಳಿಯನ್ನು ಇಸ್ರೇಲ್‌ ರಕ್ಷಣಾ ಪಡೆ(ಐಡಿಎಫ್‌) ಖಚಿತಪಡಿಸಿದೆ.

‘ಸ್ವಲ್ಪ ಸಮಯದ ಹಿಂದೆ ಇಸ್ರೇಲ್‌ ಕಡೆಗೆ ಇರಾನ್‌ ಕ್ಷಿಪಣಿಗಳು ಬರುತ್ತಿರುವುದನ್ನು ನಾವು ಗುರುತಿಸಿದ್ದೇವೆ. ಇರಾನ್‌ ಬೆದರಿಕೆಯನ್ನು ತಡೆಯಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಾಳಿ ನಡೆಯುವ ಪ್ರದೇಶಗಳಲ್ಲಿನ ಮೊಬೈಲ್ ಫೋನ್‌ಗಳಿಗೆ ಮುನ್ನೆಚ್ಚರಿಕೆ ಸಂದೇಶಗಳನ್ನು ಹೋಮ್ ಫ್ರಂಟ್ ಕಮಾಂಡ್ ಕಳುಹಿಸುತ್ತಿದೆ’ ಎಂದು ಐಡಿಎಫ್‌ ಎಕ್ಸ್‌ನಲ್ಲಿ ತಿಳಿಸಿದೆ.

ಇರಾನ್‌ ಮೇಲೆ ದಾಳಿ ನಡೆಸಿರುವ ಇಸ್ರೇಲ್‌, ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!