ಸಂಬಂಧಿಕರ ಸಾವಿಗೆ ತೆರಳುತ್ತಿದ್ದಾಗ ಅಪಘಾತ: ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತ್ಯು
ಹುಣಸೂರು: ಸಂಬಂಧಿಕರ ಸಾವಿಗೆ ತೆರಳುತ್ತಿದ್ದ ದಂಪತಿಯ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ. 27ರ ಶುಕ್ರವಾರ ಕೆ.ಆರ್.ನಗರ-ಹಾಸನ ಹೆದ್ದಾರಿಯ ನಾರಾಯಣಪುರದ ಬಳಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೀರನಹಳ್ಳಿಯ ನಂಜುಂಡಸ್ವಾಮಿ (52) ಹಾಗೂ ಪತ್ನಿ ನೇತ್ರಾವತಿ(46) ಸಾವನ್ನಪ್ಪಿದವರು. ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ದಂಪತಿ ತಮ್ಮ ಬೈಕಿನಲ್ಲಿ ಸಂಬಂಧಿಕರ ಸಾವಿನ ಹಿನ್ನೆಲೆ ಹಾಸನ ಜಿಲ್ಲೆಯ ರಾಮನಾಥಪುರದ ಬಳಿಯ ಸೋಮಪುರಕ್ಕೆ ತೆರಳುತ್ತಿದ್ದ ವೇಳೆ ಕೆ.ಆರ್.ನಗರ ತಾಲೂಕಿನ ನಾರಾಯಣಪುರ (ರೇಶ್ವರಸ್ವಾಮಿ ದೇವಾಲಯದ ಬಳಿ)ದ ಬಳಿಯ ಹೆದ್ದಾರಿಯಲ್ಲಿ ಹಾಸನ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.




