April 24, 2026

ಚಿಕ್ಕಮಗಳೂರು: ಕಾಡುಕೋಣಗಳ ದಾಳಿ: ಗಾಯಗೊಂಡ ಕೃಷಿಕ ಆಸ್ಪತ್ರೆಗೆ ದಾಖಲು

0
image_editor_output_image195451361-1772061612014.jpg

ಚಿಕ್ಕಮಗಳೂರು : ಕಾಡುಕೋಣಗಳ ದಾಳಿಯಿಂದ ಕೃಷಿಕರೊಬ್ಬರು ಗಂಭೀರ ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ ಮುಂಡೋಳು ಗ್ರಾಮದಲ್ಲಿ ಫೆಬ್ರವರಿ25 ರಂದು ನಡೆದಿದೆ.

ಗಾಯಾಳು ಕೃಷಿಕನ ಹೆಸರು ಶಿವಪ್ಪಗೌಡ (65) ಎಂದು ತಿಳಿದು ಬಂದಿದೆ. ಶಿವಪ್ಪಗೌಡ ಅವರು ಇಂದು ಮುಂಜಾನೆಯ ವೇಳೆ ಎಂದಿನಂತೆ ತಮ್ಮ ತೋಟಕ್ಕೆ ನೀರು ಹಾಯಿಸಲು ತೆರಳಿದ್ದಾರೆ. ಈ ವೇಳೆ ಅನಿರೀಕ್ಷಿತವಾಗಿ ಹಿಂಬದಿಯಿAದ ನುಗ್ಗಿ ಬಂದ ಕಾಡುಕೋಣ, ಕೊಂಬಿನಿಂದ ಮೇಲೆ ಎಗರಿ ದಾಳಿ ಮಾಡಿದೆ.

Leave a Reply

Your email address will not be published. Required fields are marked *

You may have missed

error: Content is protected !!