February 1, 2026

ಸುಡಾನ್: ಭೀಕರ ಗಣಿ ದುರಂತದಲ್ಲಿ 38 ಮಂದಿ ಮೃತ್ಯು

0
download.jpeg

ಸುಡಾನ್: ಸುಡಾನ್ ನಲ್ಲಿ ಭೀಕರ ಗಣಿ ದುರಂತ ಸಂಭವಿಸಿದ್ದು, ಭೂಕುಸಿತ ಉಂಟಾಗಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಸರ್ಕಾರಿ ಸ್ವಾಮ್ಯದ ಕಂಪನಿಯು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ದಕ್ಷಿಣ ಸುಡಾನ್‌ನ ಪಶ್ಚಿಮ ಕೊರ್ಡೋಫಾನ್ ರಾಜ್ಯದಲ್ಲಿ ಚಿನ್ನದ ಗಣಿಯಲ್ಲಿ ಕುಸಿತ ಸಂಭವಿಸಿದ ಪರಿಣಾಮ ಕನಿಷ್ಠ 38 ಮಂದಿ ಸಾವಿಗೀಡಾಗಿದ್ದಾರೆ.

ಮೂಲಗಳ ಪ್ರಕಾರ ‘ಉಮ್ ಡ್ರೈಸಾಯಾ ಗಣಿಯಲ್ಲಿ ಕುಸಿತದ ಪರಿಣಾಮವಾಗಿ ಸಾವಿಗೀಡಾದ 38 ಗಣಿ ಕಾರ್ಮಿಕರಿಗೆ ಸುಡಾನ್‌ನ ಮಿನರಲ್ ರಿಸೋರ್ಸಸ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೆಶಕ ಸಂತಾಪ ವ್ಯಕ್ತಪಡಿಸಿದ್ದಾರೆ’ ಎಂದು ಮಂಗಳವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕುಸಿದಿರುವ ಚಿನ್ನದ ಗಣಿಯು ಪಶ್ಚಿಮ ಕೊರ್ಡೋಫಾನ್ ರಾಜ್ಯದ ಎಲ್ ನುಹುದ್ ಪಟ್ಟಣದ ಸಮೀಪದಲ್ಲಿದ್ದು, ಸುಡಾನ್‌ನ ರಾಜಧಾನಿ ಖಾರ್ಟೂಮ್‌ನ ಪಶ್ಚಿಮಕ್ಕೆ ಸುಮಾರು 500 ಕಿಮೀ ದೂರದಲ್ಲಿದೆ. ಈ ಪ್ರದೇಶವು ಗಣಿಗಾರಿಕೆಗೆ ಸೂಕ್ತವಲ್ಲ ಎಂದು ಕೊರ್ಡೋಫಾನ್ ರಾಜ್ಯ ಸರ್ಕಾರ ಮತ್ತು ರಾಜ್ಯದ ಭದ್ರತಾ ಸಮಿತಿಯು ನಿರ್ಧಾರಕ್ಕೆ ಬಂದಿದ್ದು, ಗಣಿಗಾರಿಕೆಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರದ ನಿರ್ಧಾರದ ಹೊರತಾಗಿಯೂ ಗಣಿಗಾರರು ಮತ್ತೆ ಗಣಿಗಾರಿಕೆಗೆ ಅಕ್ರಮವಾಗಿ ನುಸುಳಿ ಕೆಲಸ ಮಾಡುತ್ತಿದ್ದರು ಸರ್ಕಾರ ಆರೋಪಿಸಿದೆ.

ರೆಡ್ ಸೀ, ನಹ್ರ್ ಅಲ್-ನೀಲ್, ದಕ್ಷಿಣ ಕೊರ್ಡೋಫಾನ್, ಪಶ್ಚಿಮ ಕೊರ್ಡೋಫಾನ್ ಮತ್ತು ಉತ್ತರದ ರಾಜ್ಯಗಳು ಸೇರಿದಂತೆ ಸುಡಾನ್‌ನಾದ್ಯಂತ ಸಾಂಪ್ರದಾಯಿಕ ಗಣಿಗಾರಿಕೆ ಉದ್ಯಮದಲ್ಲಿ ಸುಮಾರು 20 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ಸಾಂಪ್ರದಾಯಿಕ ಗಣಿಗಾರಿಕೆಯು ಸುಡಾನ್‌ನಲ್ಲಿನ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸುಮಾರು ಶೇಕಡ 75ರಷ್ಟು ಕೊಡುಗೆ ನೀಡುತ್ತದೆ, ಇದು ವರ್ಷಕ್ಕೆ 93 ಟನ್‌ಗಳನ್ನು ಮೀರುತ್ತದೆ. ಗಣಿಗಳು ಕುಸಿದು ಬೀಳದಂತೆ ಕನಿಷ್ಠ ಭದ್ರತಾ ಸೌಲಭ್ಯವನ್ನೂ ಸರ್ಕಾರ ನೀಡುತ್ತಿಲ್ಲ. ಇದು ಸುಡಾನ್‌ನಲ್ಲಿ ಆಗಾಗ್ಗೆ ಘಟನೆಗಳಿಗೆ ಕಾರಣವಾಗಿದೆ. ಆಫ್ರಿಕಾ ಖಂಡದಲ್ಲಿ ಸುಡಾನ್ ಚಿನ್ನದ ಉತ್ಪಾದನೆಯ ಪ್ರಮುಖ ದೇಶವಾಗಿದೆ. 2020 ರಲ್ಲಿ, ದೇಶವು 36.6 ಟನ್ ಚಿನ್ನವನ್ನು ಹೊರತೆಗೆದಿತ್ತು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!