November 22, 2024

ಲುಧಿಯಾನ ಕೋರ್ಟ್‌ ಆವರಣದಲ್ಲಿ ಸ್ಫೋಟ ಪ್ರಕರಣ:
ಆರೋಪಿ ಜರ್ಮನಿಯಲ್ಲಿ ಸೆರೆ

0

ಪಂಜಾಬ್‌: ಲುಧಿಯಾನ ನ್ಯಾಯಾಲಯದಲ್ಲಿ ಇದೇ 23ರಂದು ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಶಾಮೀಲಾಗಿರುವ ಆರೋಪ ಹೊಂದಿರುವ ಸಿಖ್ಸ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಸಂಘಟನೆಗೆ ಸೇರಿದ ಜಸ್ವಿಂದರ್‌ ಸಿಂಗ್ ಮುಲ್ತಾನಿ ಎಂಬಾತನನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ ಎಂದು ಮಂಗಳವಾರ ಇಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಲುಧಿಯಾನದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗುರುವಾರ ಬಾಂಬ್ ಸ್ಫೋಟ ಸಂಭವಿಸಿ ಆರು ಮಂದಿ ಗಾಯಗೊಂಡಿದ್ದರು. ಮುಲ್ತಾನಿಯನ್ನು ಪ್ರಶ್ನಿಸಲು ಭಾರತೀಯ ಪೊಲೀಸ್ ಅಧಿಕಾರಿಗಳ ತಂಡ ಶೀಘ್ರದಲ್ಲೇ ಜರ್ಮನಿಗೆ ತಲುಪಲಿದೆ.

Leave a Reply

Your email address will not be published. Required fields are marked *

error: Content is protected !!