February 16, 2026

ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ: ಎರಡು ದಿನಗಳ ಧಾರ್ಮಿಕ ಮತಪ್ರವಚನ: ಸಿರಾಜುದ್ದೀನ್ ಖಾಸಿಮಿ ಅವರಿಂದ ಪ್ರಭಾಷಣ

0
image_editor_output_image-1355424693-1771130700275

ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ವತಿಯಿಂದ ಎರಡು ದಿನಗಳ ಧಾರ್ಮಿಕ ಮತಪ್ರವಚನ ಬಹಳ ವಿಜೃಂಭಣೆಯಿಂದ ನಡೆಯಿತು. ಕೇರಳದ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಹಾಗೂ ಅಬ್ದುಲ್ ರಝಾಕ್ ಅಬ್ರಾರಿ ಪತ್ತನತಿಟ್ಟಂ ಇವರು ಪ್ರವಚನ ನೀಡಿದರು‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಕರಾವಳಿ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ.ವಿ.ಕೆ.ಹೆಗ್ಡೆ,ರೊನಾಲ್ಡ್ ಮಾರ್ಟೀಸ್ ಹಾಗೂ ದಿನೇಶ್ ಕೋಡಪದವು ಇವರನ್ನು ಸನ್ಮಾನಿಸಲಾಯಿತು.

ಗೌರವಾಧ್ಯಕ್ಷ ವಿ.ಎಸ್ ಇಬ್ರಾಹಿಂ, ಶೈಖುನಾ ಮಹಮೂದಲ್ ಫೈಝಿ ವಾಲೆಮುಂಡೋವು ಶೈಖುನಾ ಶಿಹಾಬುದ್ದೀನ್ ತಂಙಳ್ ಮದಕ, ಹಾಪಿಳ್ ಮಹಮ್ಮದ್ ಶರೀಫ್ ಖಾಮಿಲ್ ಸಖಾಫಿ ಉಕ್ಕುಡ, ಮಹಮ್ಮದ್ ರಫೀಕ್ ಅಹ್ಸನಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಮಸೀದಿ ಅಧ್ಯಕ್ಷ ಹಾಜಿ ವಿ‌.ಅಶ್ರಫ್ ಒಕ್ಕೆತ್ತೂರು ಕರಾವಳಿ ಪ್ರಸ್ತಾವನೆಗೈದರು. ಮುಖ್ಯ ಅತಿಥಿಗಳಾಗಿ ಡಾ| ಅಬ್ದುಲ್ ಬಶೀರ್ ಜನಪ್ರಿಯ, ಎಂ.ಎಸ್, ಮುಹಮ್ಮದ್ ರಶೀದ್ ವಿಟ್ಲ, ಅಶ್ರಫ್ ವಿ.ಎಚ್, ಡಿ.ಬಿ. ಅಬೂಬಕ್ಕರ್, ಶಾಕೀರ್ ಅಳಕೆಮಜಲು, ರಶೀದ್ ಸುರೈಜಿ ಸಖಾಫಿ, ಅಬೂಬಕ್ಕರ್ (ಪುತ್ತು) ಉಪ್ಪಿನಂಗಡಿ, ಬಶೀರ್ ಲೂಟ್ಲೆ, ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಅಬೂಬಕರ್ ಅನಿಲಕಟ್ಟೆ, ವಿ.ಕೆ.ಎಂ. ಅಶ್ರಫ್, ಇಕ್ಬಾಲ್ ಹಾನೆಸ್ಟ್
ಆಬಿದ್ ಲಕ್ಷೀಶ್ವರ, ಅಝೀಝ್ ಸನ, ರಿಯಾಝ್ ಕಡಂಬು ಹಾಗೂ ಪರಿಸರದ ಮಸೀದಿಗಳ ಖತೀಬರುಗಳು, ಅಧ್ಯಕ್ಷರು, ಒಕ್ಕೆತ್ತೂರು ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಸೂಪರ್, ಕಾರ್ಯದರ್ಶಿ ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.
ಸುಲೈಮಾನ್ ಸಖಾಫಿ ಸ್ವಾಗತಿಸಿ, ಸಾದಿಕ್ ಸಖಾಫಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!