ವಿಟ್ಲ: ಅಪಘಾತ ನಡೆಸಿ ಎಸ್ಕೇಪ್ ಆಗಿದ್ದ ಮಾರುತಿ ವ್ಯಾನ್ ಪತ್ತೆ
ವಿಟ್ಲ: ಸಾಲೆತ್ತೂರು-ವಿಟ್ಲ ರಸ್ತೆಯ ಕಡಂಬು ಎಂಬಲ್ಲಿ ವಿಟ್ಲದ ಕಡೆಗೆ ಹೋಗುತ್ತಿದ್ದ ಹೋಂಡಾ ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಮಾರುತಿ ವ್ಯಾನನ್ನು ಸಾರ್ವಜನಿಕರು ಪತ್ತೆಹಚ್ಚಿದ್ದಾರೆ.
ಕುಡ್ತಮುಗೇರು ಸಾಲೆತ್ತೂರು ಮಾರ್ಗವಾಗಿ ಪೆ.6ರಂದು ಪ್ರತ್ಯಕ್ಷವಾದ ವ್ಯಾನ್ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ಕೆ.ಎ.19ಎಮ್.ಹೆಚ್ 1518 ಮಾರುತಿ ವ್ಯಾನ್ ಪರಾರಿಯಾಗಿರುವುದು ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು. ಇಂದು ಈ ವ್ಯಾನ್ ಕಣ್ಣಿಗೆ ಕಾಣುತ್ತಿರುವಂತೇಯೇ ಗ್ರಾಮಸ್ಥರು ವ್ಯಾನನ್ನು ಬೆನ್ನತ್ತಿದ್ದಾರೆ. ಆದರೆ ವ್ಯಾನ್ ಜನರ ಕಣ್ತಪ್ಪಿಸಿ ಹೋಗಿದೆ. ಹುಡುಕಾಟ ಮತ್ತೆ ಮುಂದುವರಿಸಿದಾಗ ತಾಮರಾಜೆ ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ವ್ಯಾನ್ ಕಂಡುಬಂದಿದೆ. ಇದು ಬೀಡಿ ಕಂಟ್ರಾಕ್ಟುದಾರ ಇಸ್ಮಾಯಿಲ್ ಮಾಲಿಕತ್ವದ ವ್ಯಾನ್ ಎಂದು ತಿಳಿದು ಬಂದಿದೆ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ಅಪಘಾತವೆಸಗಿದ ಗಾಡಿಯನ್ನು ಗುರುತಿಸಿ ವಶಕ್ಕೆ ಪಡೆದಿದ್ದಾರೆ.




