ಸುಳ್ಯ: ಸೊಸೆಯ ಮೇಲೆ ಹಲ್ಲೆ: ಮಾವನ ವಿರುದ್ಧ ಪ್ರಕರಣ ದಾಖಲು
ಸುಳ್ಯ: ತಾಲೂಕಿನ ಸಂಪಾಜೆಯಲ್ಲಿ ಸೊಸೆಯ ಮೇಲೆ ಮಾವ ಹಲ್ಲೆ ನಡೆಸಿದ ಘಟನೆ ಸುಳ್ಯ ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಮನೆಯ ಕೋಣೆಯಲ್ಲಿದ್ದಾಗ, ಅವರ ಮಾವ ಅಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಮಹಿಳೆ ತಪ್ಪಿಸಿಕೊಂಡು ಹೊರಗೆ ಬಂದಾಗ ಮಹಿಳೆಯ ಗಂಡನು ಸಹ ತಂದೆಯ ಪರವಾಗಿ ವರ್ತಿಸಿ ಚಿಕಿತ್ಸೆ ಕೊಡಿಸಲು ನಿರಾಕರಿಸಿದ್ದಾರೆ.
ನಂತರ ಹಲ್ಲೆಗೊಳಗಾದ ಮಹಿಳೆಯನ್ನು ಅವರ ತಂದೆ-ತಾಯಿ ಸಂಪಾಜೆ ಸರಕಾರಿ ಆಸ್ಪತ್ರೆಗೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಬಗ್ಗೆ ಹಲ್ಲೆಗೊಳಗಾದ ಮಹಿಳೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಘಟಣಾ ಸ್ಥಳದ ಆದಾರದಲ್ಲಿ ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




