ಜಿಫ್ರಿ ಮುತ್ತುಕೋಯ ತಂಙಳರಿಗೆ ಜೀವ ಬೆದರಿಕೆ ಕರೆ ವಿಚಾರ: ಅಗತ್ಯವಿದ್ದರೆ ಪೊಲೀಸ್ ರಕ್ಷಣೆ ಹಾಗೂ ಸರ್ಕಾರದ ಬೆಂಬಲ: ಸಚಿವ ವಿ ಅಬ್ದುರಹ್ಮಾನ್ ಪ್ರತಿಕ್ರಿಯೆ

ಕೋಝಿಕ್ಕೋಡ್: ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳರಿಗೆ ಅವರ ಜೀವ ಬೆದರಿಕೆ ಸಂಬಂಧಿತ ಹೇಳಿಕೆಗೆ ಸಚಿವ ವಿ ಅಬ್ದುರಹ್ಮಾನ್ ಪ್ರತಿಕ್ರಿಯಿಸಿದ್ದಾರೆ.
ಅಗತ್ಯಬಿದ್ದರೆ ಪೊಲೀಸ್ ರಕ್ಷಣೆ ನೀಡುವುದಾಗಿ ಹಾಗೂ ಸರ್ಕಾರದ ಎಲ್ಲ ಬೆಂಬಲವೂ ತಮಗಿದೆ ಎಂದು ಸಚಿವರು ಹೇಳಿದರು. ತಂಙಳರಿಗೆ ದೂರವಾಣಿ ಕರೆ ಮಾಡಿ ಸಚಿವರು ಸರ್ಕಾರಿ ಭದ್ರತೆಯ ಭರವಸೆ ನೀಡಿದರು.
ಆದರೆ, ಈಗ ಭದ್ರತೆ ಬೇಕಿಲ್ಲ ಎಂದು ತಂಙಳ್ ಸಚಿವರಿಗೆ ತಿಳಿಸಿದರು. ಕೆಲ ದಿನಗಳ ಹಿಂದೆ ಬೆದರಿಕೆ ಹಾಕಲಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಜಿಫ್ರಿ ಮುತ್ತುಕೋಯ ತಂಙಳ್ ಅವರು ಸಚಿವರಿಗೆ ತಿಳಿಸಿದರು.
ಮಲಪ್ಪುರಂನ ಆನಕ್ಕಯಂ ಎಂಬಲ್ಲಿ ಸಮಸ್ತದ ಅಧೀನದ ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ತಂಙಳ್ ರು ತಮಗೆ ಬೆದರಿಕೆಯ ಕರೆ ಬಂದ ಬಗ್ಗೆ ಬಹಿರಂಗಪಡಿಸಿದ್ದರು. ಚೆಂಬರಿಕ ಖಾಝಿಯವರ ಅನುಭವ ಉಂಟಾಗಲಿದೆ ಎಂದು ಅನಾಮಿಕ ಕರೆ ಬಂದಿತ್ತು ಎಂದ ತಂಙಳ್, ನಾನು ಯಾವುದೇ ಬೆದರಿಕೆಗೆ,ದಿಟ್ಟ ನಿಲುವಿನಿಂದ ಹಿಂದೆ ಸರಿಯುವವನಲ್ಲ ಎಂದು ಹೇಳಿದ್ದರು.
ಕಾರ್ಯಕ್ರಮದಲ್ಲಿ ತಂಙಳ್ ಹೇಳಿದ್ದೇನು?
22 ದಿನಗಳ ಹಿಂದೆ ಅನಾಮಧೇಯ ದೂರವಾಣಿ ಕರೆ ಬಂದಿತ್ತು. ಸಿಎಂ ಅವರ ಅನುಭವ ಗೊತ್ತಿದೆಯಲ್ವ ಎಂದರು. ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆ ವಿಷಯವನ್ನು ಕಳೆದ ದಿನ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಮಾಡಿದ್ದೇನೆ. ಕಾರ್ಯಕರ್ತರು ಮತ್ತು ಮುಖಂಡರು ಇಂತಹ ಹಲವಾರು ಬೆದರಿಕೆಗಳನ್ನು ಉಂಟುಮಾಡಬಹುದು, ಅವೆಲ್ಲವನ್ನೂ ಜಯಿಸಿ ಮುನ್ನಡೆಯಬೇಕು ಎಂದು ಹೇಳುತ್ತಿದ್ದೆ. ಅದೊಂದು ನಂಬರ್ ಲೆಸ್ ಕರೆ ಆಗಿದ್ದರಿಂದ ಯಾವುದೇ ದೂರು ನೀಡಲಿಲ್ಲ. ನನ್ನದು ಚಿಕ್ಕ ಫೋನ್, ಫೋನ್ ಯಾವಾಗ ರಿಂಗಾಯಿತು ಎಂದು ನನಗೆ ನೆನಪಿಲ್ಲ. ವಿಷಯದ ಬಗ್ಗೆ ಯಾವುದೇ ದೂರು ನೀಡಲಾಗುವುದಿಲ್ಲ. ನನ್ನ ಬಳಿ ದೂರು ಇದ್ದರೆ ಮಾತ್ರ, ಇತರರು ಅದನ್ನು ಚರ್ಚಿಸಬೇಕಾದುದ್ದು ಎಂದು ಅವರು ಪ್ರತಿಕ್ರಿಯಿಸಿದರು.