ಮಂಗಳೂರು: ತಮ್ಮ ವಿಭಿನ್ನ ಶೈಲಿಯ ವಿಡಿಯೋಗಳಿಂದ ಹವಾ ಸೃಷ್ಠಿಸಿದ ಆಶಾ ಪಂಡಿತ್ ಹೃದಯಾಘಾತದಿಂದ ಸಾವು
ಮಂಗಳೂರು: ತಮ್ಮ ವಿಭಿನ್ನ ಶೈಲಿಯ ವಿಡಿಯೋಗಳಿಂದ ಕರಾವಳಿಯಲ್ಲಿ ಹವಾ ಸೃಷ್ಠಿಸಿದ ಆಶಾ ಪಂಡಿತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜಾಲತಾಣದಲ್ಲಿ ವಿಶಿಷ್ಟ ಶೈಲಿಯಲ್ಲಿ ಬೈಗುಳದ ವಿಡಿಯೋದಿಂದಲೇ ಪ್ರಸಿದ್ದಿ ಹೊಂದಿದ್ದ ಅವರು ತುಳು ರಂಗಭೂಮಿಯಲ್ಲೂ ಕೆಲಸ ಮಾಡಿದ್ದರು. ಸಾಮಾಜಿಕ ತಾಣದಲ್ಲಿ ಆಶಾ ಅಕ್ಕ ಎಂದೇ ಸುದ್ದಿಯಾಗುತ್ತಿದ್ದರು. ಆಶಾ ಪಂಡಿತ್ ಅಳಪೆ ಬಳಿ ಸಣ್ಣ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರು. Instagram ನಲ್ಲಿ ಸುಮಾರು 27 ಸಾವಿರ ಫಾಲೋವರ್ಸ್ ನ್ನು ಹೊಂದಿದ್ದರು.




