January 31, 2026

ಮಂಗಳೂರು: ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ದಾಳಿ: ಮೊಬೈಲ್ ಗಳು ಪತ್ತೆ

0
image_editor_output_image64296864-1768607641793.jpg

ಮಂಗಳೂರು: ಮಂಗಳೂರು ಕಾರಾಗೃಹದಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಶರಣಬಸಪ್ಪ ದಿಢೀರ್ ದಾಳಿ ನಡೆಸಿದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ಗಳು ಪತ್ತೆಯಾಗಿದ್ದು, ಈ ಕುರಿತಂತೆ ಪ್ರಕರಣ ದಾಖಲಾಗಿದೆ.

ಮಂಗಳೂರು ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ದಿನಾಂಕ:14-01-2026 ರಂದು ರಾತ್ರಿ ಸಮಯ 22-55 ಗಂಟೆಯಿಂದ 23.50 ಗಂಟೆಯ ಸಂದರ್ಭ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಮಂಗಳೂರು ಜೈಲಿನಲ್ಲಿ ದಿಢೀರ್ ತಪಾಸಣೆ ನಡೆಸಿದ್ದಾರೆ.

ಈ ವೇಳೆ ಕಾರಾಗೃಹದ ಒಳಗಡೆ “ಎ” ವಿಭಾಗದ ಕೊಠಡಿ ಸಂಖ್ಯೆ 3 ರಲ್ಲಿ ಮತ್ತು “ಬಿ” ವಿಭಾಗದ ಕೊಠಡಿ ಸಂಖ್ಯೆ 5 ರಲ್ಲಿ ಅನಿರೀಕ್ಷಿತ ತಪಾಸಣೆ ಮಾಡಿದಾಗ “ಎ” ವಿಭಾಗದ ಕೊಠಡಿ ಸಂಖ್ಯೆ 3 ರಲ್ಲಿ 1). ವಿವೋ ಮೊಬೈಲ್ ಪೋನ್ ಏರ್ ಟೆಲ್ ಸಿಮ್ ಕಾರ್ಡ ಸಹಿತ. 2). ಕಪ್ಪು ಬಣ್ಣದ ಹೆಚ್.ಡಿ.ಎಂ ಕೀಪ್ಯಾಡ್ ಮೋಬೈಲ್ ಏರ್ ಟೆಲ್ ಸಿಮ್ ಕಾರ್ಡ ಸಹಿತ, 3).ಮೊಬೈಲ್ ಚಾರ್ಜರ್ ಅಡೆಪ್ಟರ್ ಮತ್ತು 4). ಚಾರ್ಜರ್ ಕೇಬಲ್ ಗಳು-02 ದೊರೆತಿರುತ್ತವೆ. ಮತ್ತು “ಬಿ” ವಿಭಾಗದ ಕೊಠಡಿ ಸಂಖ್ಯೆ 05 ರಲ್ಲಿ 1). ಕಂದು ಬಣ್ಣದ ನೋಕಿಯಾ ಕೀ ಪ್ಯಾಡ್ ಮೊಬೈಲ್ ಪೋನ್ ದೊರೆತಿದ್ದು, ಈ ಬಗ್ಗೆ ಪಿರ್ಯಾದಿದಾರರು ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ:15-01-2026 ರಂದು ತಪಾಸಣಾ ಸಮಯದಲ್ಲಿ ದೊರೆತಂತಹ ನಿಷೇದಿತ ವಸ್ತುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಖೈದಿಗಳ ವಿರುದ್ದ ಕ್ರಮಕ್ಕೆ ದೂರು ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!