March 18, 2026

ಕಳ್ಳತನಕ್ಕೆ ಬಂದು ಎಕ್ಸಾಸ್ಟ್ ಫ್ಯಾನ್ ಕಿಟಕಿಯಲ್ಲಿ ಸಿಕ್ಕಿ ಹಾಕಿಕೊಂಡ ಕಳ್ಳ: ವಿಡಿಯೋ ವ್ಯಾಪಕ ವೈರಲ್

0
n6959384931767699495356198bf57ddbfc78aa047224d0d5996504fa5545c83356a55cb66de59c52db330c.jpg

ರಾಜಸ್ಥಾನ: ಕಳ್ಳನೊಬ್ಬ ಮನೆಯೊಂದಕ್ಕೆ ಕದಿಯಲು ಬಂದು ಮನೆಯ ಎಕ್ಸಾಸ್ಟ್ ಫ್ಯಾನ್ ನ ಕಿಟಕಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ರಾಜಸ್ತಾನದ ಬೋರ್ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ್ ನಗರದಲ್ಲಿ ನಡೆದಿದೆ.

ಕಳ್ಳತನ ಮಾಡಲು ಮನೆಗೆ ನುಗ್ಗಿದ ವ್ಯಕ್ತಿ ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್‌ನ ಶಾಫ್ಟ್‌ನಲ್ಲಿ ಸಿಲುಕಿಕೊಂಡು ಸುಮಾರು ಒಂದು ಗಂಟೆ ಕಾಲ ಅಸಹಾಯಕ ಸ್ಥಿತಿಯಲ್ಲಿ ನೇತಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜನವರಿ 3ರಂದು ಖತು ಶ್ಯಾಮ್‌ ಜಿಗೆ ಪ್ರಯಾಣಿಸಿದ್ದ ಸುಭಾಷ್ ಕುಮಾರ್ ರಾವತ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮರುದಿನ ಬೆಳಗಿನ ಜಾವ ಸುಮಾರು 1 ಗಂಟೆ ವೇಳೆಗೆ ರಾವತ್ ಅವರ ಪತ್ನಿ ಮನೆಗೆ ಹಿಂದಿರುಗಿ ಮುಖ್ಯ ಬಾಗಿಲು ತೆರೆಯುತ್ತಿದ್ದಂತೆಯೇ, ಹೊರಗೆ ನಿಲ್ಲಿಸಿದ್ದ ಸ್ಕೂಟರ್‌ನ ಹೆಡ್‌ಲೈಟ್‌ಗಳ ಬೆಳಕು ಅಡುಗೆ ಮನೆಗೆ ಬಿದ್ದಿದೆ. ಈ ವೇಳೆ ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್‌ನ ಶಾಫ್ಟ್‌ನಲ್ಲಿ ಕಳ್ಳನೊಬ್ಬ ಅರ್ಧ ದೇಹ ಮನೆಯೊಳಗೆ ಹಾಗೂ ಉಳಿದ ಭಾಗ ಹೊರಗಡೆ ಇರುವಂತೆ ಸಿಲುಕಿಕೊಂಡಿದ್ದ ದೃಶ್ಯ ಕಾಣಿಸಿಕೊಂಡಿದೆ.

ಪೊಲೀಸರ ಪ್ರಕಾರ, ಆರೋಪಿ ಕಳ್ಳತನಕ್ಕೆ ಮನೆಯ ಆವರಣವನ್ನು ಪ್ರವೇಶಿಸಿದ್ದಾನೆ. ಆದರೆ ಎಕ್ಸಾಸ್ಟ್ ಫ್ಯಾನ್ ಶಾಫ್ಟ್ ಮೂಲಕ ಒಳನುಗ್ಗಲು ಯತ್ನಿಸಿದ ವೇಳೆ ಆತ ಸಿಲುಕಿಕೊಂಡಿದ್ದು, ತನ್ನನ್ನು ತಾನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಶಬ್ದ ಕೇಳಿದ ಅವನ ಸಹಚರನೊಬ್ಬ ಸ್ಥಳದಿಂದ ಪರಾರಿಯಾಗಿದ್ದು, ಸಿಲುಕಿದ್ದ ವ್ಯಕ್ತಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಎಕ್ಸಾಸ್ಟ್ ಫ್ಯಾನ್ ಶಾಫ್ಟ್‌ನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!