January 31, 2026

ಬಂಟ್ವಾಳ: ದೇವ ಮಾತಾ ದೇವಾಲಯ ಮೊಗರ್ನಾಡು ಇದರ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆ

0
IMG-20260103-WA0002.jpg

ವಿಟ್ಲ: ಬಂಟ್ವಾಳ ತಾಲೂಕಿನ ಅಮ್ಟೂರು ಕರಿಂಗಾಣ ದೇವ ಮಾತಾ ದೇವಾಲಯ ಮೊಗರ್ನಾಡು ಇದರ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ ಸಮಾರೋಪ ಸಮಾರಂಭ ನಡೆಯಿತು.‌

250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ
ಅಂಗವಾಗಿ ‘ತ್ರಿದುಮ್’ ಸಂಭ್ರಮಾಚರಣೆಯನ್ನು ವಿಜ್ರಂಭಣೆಯನ್ನು ಆಚರಿಸಲಾಯಿತು.

ಡಿಸೆಂಬರ್ 29ರಂದು ಜ್ಯುಬಿಲಿ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ದಾನವನ್ನು ನೀಡಿದ ದಾನಿಗಳಿಗೆ ಮತ್ತು ದೇವಾಲಯದ ಭಕ್ತಾಭಿಮಾನಿಗಳಿಗೆ ವಿಶೇಷ ಬಲಿ ಪೂಜೆಯನ್ನು ಏರ್ಪಡಿಸಲಾಗಿತ್ತು. ನಂತೂರು ಮಂಗಳ ಜ್ಯೋತಿಯ ನಿರ್ದೇಶಕರರಾದ ವಂದನೀಯ ಫಾದರ್ ರೋಹಿತ್ ಡಿಕೊಸ್ತ ದಿವ್ಯ ಬಲಿಪೂಜೆಯನ್ನು ನೇರವೇರಿಸಿದರು.

ಡಿಸೆಂಬರ್ 30ರಂದು ಪೂರ್ವಜರ ಆತ್ಮಕ್ಕಾಗಿ ಶಾಂತಿಯನ್ನು ಕೋರಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಲಾಯಿತು. ಪ್ರಧಾನ ಆರ್ಚಕರಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಪಾಲನಾ ಆಯೋಗದ ಸಂಯೋಜಕರಾದ ಅತಿ ವಂದನೀಯ ಫಾದರ್ ನವೀನ್ ಪಿಂಟೊ ಬಲಿಪೂಜೆಯನ್ನು ನೆರವೇರಿಸಿದರು.

ಪವಿತ್ರ ದಿವ್ಯ ಬಲಿ ಪೂಜೆಯ ನಂತರ ಪೂರ್ವಜರ ಸ್ಮಶಾನದಲ್ಲಿ ಪುನರುತ್ಥಾನದ ಏಸುಕ್ರಿಸ್ತನ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪುನರುತ್ಥಾನದ ಏಸುಕ್ರಿಸ್ತನ ಮೂರ್ತಿಯ ಪ್ರಾಯೋಜಕರಾದ ವಿಲಿಯಂ ಲೋಬೊ ಮತ್ತು ಹೆಲೆನ್ ಲೋಬೊ ಈ ಮೂರ್ತಿಯನ್ನು ಅನಾವರಣಗೊಳಿಸಿದರು.

ಡಿಸೆಂಬರ್ 31 ರಂದು ಮೊಗರ್ನಾಡ್ ದೇವ ಮಾತಾ ದೇವಾಲಯದಲ್ಲಿ ಸುಮಾರು 103 ಮಕ್ಕಳಿಗೆ ಮಂಗಳೂರಿನ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾರವರು ಪವಿತ್ರ ದೃಢಿಕರಣದ ಸಂಸ್ಕಾರವನ್ನು ನೀಡಿದರು.

ಜ್ಯುಬಿಲಿ ಸಮಾರಂಭದ ಮೊದಲ ದಿನ ನೀಡಿದ ಮಾತೆ ಮರಿಯಮ್ಮ ಮತ್ತು ಪವಿತ್ರ ಶಿಲುಬೆಯನ್ನು 5 ವಲಯದ ಮುಖ್ಯಸ್ಥರು ಅತಿ ವಂದನೀಯ ಡಾಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾರವರಿಗೆ ಹಸ್ತಾಂತರಿಸಿದರು.

ಜನವರಿ 1 ,2026 ಹೊಸ ವರುಷದಂದು ದೇವ ಮಾತಾ ದೇವಾಲಯದ 250ನೇ ಜ್ಯುಬಿಲಿ ಸಮಾರೋಪ ಸಮಾರಂಭವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾರವರು ವಹಿಸಿ, ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದಕ್ಕಾಗಿ ಮೊಗರ್ನಾಡ್ ದೇವಾಲಯದ ಧರ್ಮಗುರುಗಳನ್ನು ಮತ್ತು ಭಕ್ತಾದಿಗಳನ್ನು ವಂದಿಸಿದರು. ಮಾತ್ರವಲ್ಲದೇ ಎಲ್ಲಾ ವರ್ಗದ ಜನರು ಹೀಗೆ ಸದಾ ಒಗ್ಗಟ್ಟಿನಿಂದ ಇರುವಂತೆ ಕಿವಿಮಾತನ್ನು ಹೇಳಿದರು.

ದೇವಾಲಯದಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಧರ್ಮಗುರುಗಳಿಗೆ, ಈ ಹಿಂದಿನ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷರು ಕಾರ್ಯದರ್ಶಿಗಳಿಗೆ, ಪ್ರಸ್ತುತ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷರು ಕಾರ್ಯದರ್ಶಿಗಳಿಗೆ, ದೇವಾಲಯದ ಆರ್ಥಿಕ ಪಾಲನಾ ಮಂಡಳಿಯ ಸದಸ್ಯರಿಗೆ, 5 ವಲಯದ ಮುಖ್ಯಸ್ಥರಿಗೆ, 13 ಸಮಿತಿಯ ಸಂಚಾಲಕರಿಗೆ, 20 ವಾರ್ಡಿನ ಗುರಿಕಾರರಿಗೆ, ಸಂಘ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ ಪದಾದಿಕಾರಿಗಳಿಗೆ, ಶಾಲಾ ಮುಖ್ಯೋಪಾಧ್ಯಾಯರಿಗೆ, ಧರ್ಮಗುರುಗಳಿಗೆ, ಧರ್ಮ ಭಗಿನಿಯರಿಗೆ, ಪ್ರಧಾನ ಸೇವಕರಿಗೆ, ದೇವಾಲಯದ ಸಿಬ್ಬಂದಿ ವರ್ಗದವರಿಗೆ, ದಾನ ನೀಡಿದವರಿಗೆ, ವಿಶೇಷ ಅತಿಥಿಗಳಿಗೆ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯ ಅತಿಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

250ನೇ ಜ್ಯುಬಿಲಿ ವರ್ಷಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ 5 ವಲಯದ ಪದಾದಿಕಾರಿಗಳಿಗೆ ವೇದಿಕೆಯಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.

250 ನೇ ವರುಷದ ಸೊವಿನಿಯರ್ ಸ್ಮಾರಕ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ತದನಂತರ ಮಾಂಡ್ ಸೊಭಾಣ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಧ್ಯಕ್ಷ ಸ್ಥಾನ ವಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಮುಖ್ಯ ಅತಿಥಿಗಳಾದ ಸಂತ ಜೋನ್ ಪಾವ್ಲ್ ಪ್ರಾಂತ್ಯದ ವಿಕಾರ್ ಫೋರೇನ್ ಆತಿ ವಂದನೀಯ ಗುರು ಐವನ್ ಮೈಕಲ್ ರೋಡ್ರಿಗಸ್, ದಕ್ಷಿಣ ಏಶಿಯಾದ ಜೆಸ್ವೀಟ್ ಮೇಳದ ಅಧ್ಯಕ್ಷ ರಾದ ಅತೀ ವಂದನೀಯ ಗುರು ಸ್ಟೇನಿ ಡಿಸೋಜಾ ಮತ್ತು ಅರ್ಸುಲಾಯ್ನ್ ಸಿಸ್ಟರ್ ಮೇಳದ ಮಂಗಳೂರು ಪ್ರಾಂತ್ಯದ ಪ್ರೊವಿನ್ಸಿಯಲ್ ಆತಿ ವಂದನೀಯ ಸಿಸ್ಟರ್ ಕ್ಲಾರಾ ಮಿನೇಜಸ್ ಹಾಗೂ ಗೌರವಾನ್ವಿತ ಅತಿಥಿಗಳಾದ ಮೊಗರ್ನಾಡ್ ಧರ್ಮಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಂದನೀಯ ಗುರು ಪೀಟರ್ ಆರಾನ್ಹಾ, ವಂದನೀಯ ಗುರು ಲಿಯೋ ವಿಲ್ಲಿಯಮ್ ಲೋಬೊ, ವಂದನೀಯ ಗುರು ಡಾ. ಮಾರ್ಕ್ ಕ್ಯಾಸ್ಟಲಿನೊ ಮತ್ತು ವಂದನೀಯ ಗುರು ಪಾವ್ಲ್ ಪಿಂಟೊ.
ಮೊಗರ್ನಾಡ್ ಧರ್ಮಕ್ಷೇತ್ರದ ಧರ್ಮಗುರು ವಂದನೀಯ ಗುರು ಅನಿಲ್ ಡಿಮೆಲ್ಲೊ, ದೇವಮಾತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಗುರು ನವೀನ್ ಪ್ರಕಾಶ್ ಪಿಂಟೊ, ಪ್ರಧಾನ ಸೇವಕ ಅವಿಲ್ ಸಾಂತ್ಮಾಯೋರ್, ಉಪಾಧ್ಯಕ್ಷರಾದ ಸಂತೋಷ್ ಡಿಸೋಜಾ, ಕಾರ್ಯದರ್ಶಿ ವಿಲ್ ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕರಾದ ಎಮಿಲಿಯಾನಾ ಡಿಕುನ್ಹಾ, ನಿಯೋಜಿತ ಉಪಾಧ್ಯಕ್ಷ ರಾದ ನೊಯೆಲ್ ಲೋಬೊ, ನಿಯೋಜಿತ ಸಂಯೋಜಕರಾದ ಸೀಮಾ ಮರಿಯ ಡಿಕುನ್ಹಾ, ಜ್ಯುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ ಉಪಸ್ಥಿತರಿದ್ದರು.

ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಸ್ವಾಗತಿಸಿದರು.
ನವೀನ್ ರಾಜೇಶ್ ಡಿಕುನ್ಹಾ ವಂದಿಸಿದರು. ರೆನ್ನಿ ಫೆರ್ನಾಂಡಿಸ್, ಕ್ಯಾರಲ್ ಕ್ರಾಸ್ತಾ ಮತ್ತು ಸತೀಶ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!