ಪುತ್ತೂರು: ಗಾಂಧಿಕಟ್ಟೆ ಬಳಿ ಅಂಬೇಡ್ಕರ್ ಬ್ಯಾನರ್ ತೆರವುಗೊಳಿಸಿದ ನಗರಸಭೆ
ಪುತ್ತೂರು: ನಗರದ ಗಾಂಧಿಕಟ್ಟೆ ಬಳಿ ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ ಸಂಘ .ನಿ. ದ (AVSS) ಬ್ಯಾನರ್ ಹಾಕಲಾಗಿತ್ತು, ಇದೀಗ ಬ್ಯಾನರ್ ಕಿತ್ತೆಸೆದ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಉದ್ಘಾಟನಾ ಸಮಾರಂಭದ ಬ್ಯಾನರ್ ನಲ್ಲಿ ಅಂಬೇಡ್ಕರ್ ಭಾವಚಿತ್ರವಿದ್ದು, ಬ್ಯಾನರ್ ಕಿತ್ತೆಸೆದಿರುವುದಕ್ಕೆ ಪುತ್ತೂರು ನಗರಸಭೆ ವಿರುದ್ಧ AVSS(ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ) ಸಮಿತಿ ಕಿಡಿಕಾರಿ ಆಕ್ರೋಶ ವ್ಯಕ್ತಪಡಿಸಿದೆ.
ನಾಳೆ ಸುಳ್ಯದ ಕೆವಿಜಿ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು , ಈ ಹಿನ್ನೆಲೆ ಪುತ್ತೂರಿನಲ್ಲೂ ಕಾರ್ಯಕ್ರಮದ ಬಗ್ಗೆ ಬ್ಯಾನರ್ ಹಾಕಲಾಗಿತ್ತು. ಪುತ್ತೂರು ನಗರಸಭೆಯಿಂದ ಅನುಮತಿ ಪಡೆದು AVSS ಸಮಿತಿ ಬ್ಯಾನರ್ ಹಾಕಿದ್ದರು.
5 ದಿನಗಳ ಅನುಮತಿಯನ್ನ ಪುತ್ತೂರು ನಗರಸಭೆ ನೀಡಿತ್ತು. ಕಾರ್ಯಕ್ರಮಕ್ಕೆ ಒಂದು ದಿನ ಬಾಕಿ ಇರುವಾಗಲೇ ನಗರಸಭೆ ಬ್ಯಾನರ್ ನ್ನು ಕಿತ್ತೆಸೆದಿದೆ. 5 ದಿನಗಳ ಅನುಮತಿ ಇದ್ರೂ ಬ್ಯಾನರ್ ನ್ನ ಮುಂಚಿತವಾಗಿ ತಗೆದ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಕೂಡಲೇ ಬ್ಯಾನರ್ ನ್ನು ಎಲ್ಲಿ ಹಾಕಲಾಗಿತ್ತೋ ಅಲ್ಲೆ ಮತ್ತೆ ಹಾಕುವಂತೆ ಪುತ್ತೂರು ನಗರಸಭೆಗೆ ಒತ್ತಾಯಿಸಿದ AVSS ಸಮಿತಿ.
ಬ್ಯಾನರ್ ಹಾಕದಿದ್ದಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳನ್ನ ಒಟ್ಟುಗೂಡಿಸಿ ಪ್ರತಿಭಟನೆ ನಡೆಸಲಾಗುವುದು, ನಗರಸಭೆ ಪೌರಾಯುಕ್ತ, ಸಿಬ್ಬಂದಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ ಮಾಡಲಾಗಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತು ಬ್ಯಾನರ್ ನ್ನು ಅಳವಡಿಸುಂತೆ AVSS ಸಮಿತಿ ಒತ್ತಾಯಿಸಿದೆ.




