ಸಾವಿತ್ರಿ ಭಾಯಿ ಪುಲೆ ಮಹಿಳಾ ಕೌಶಲ್ಯ ಕೇಂದ್ರದಲ್ಲಿ 3 ನೇ ಹಂತದ ಕಸೂತಿ ತರಬೇತಿ ಉದ್ಘಾಟನೆ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ಸಾವಿತ್ರಿ ಬಾಯಿ ಪುಲೆ ಮಹಿಳಾ ಸಬಲೀಕರಣ ಕೌಶಲ್ಯ ಕೇಂದ್ರ ಮಾಣಿ ಇಲ್ಲಿ ಮಾಣಿಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ), ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಸಹಯೋಗದೊಂದಿಗೆ 3 ನೇ ಹಂತದ ಕಸೂತಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಶ್ರೀ ಜ್ಯೋತಿರಾಜ್ ಇವರು ಶಿಬಿರರ್ಥಿಗಳಿಗೆ ಸ್ವ ಉದ್ಯೋಗದ ಕುರಿತ ಮಾಹಿತಿ ನೀಡಿದರು. ಭಾರತೀಯ ವಿಕಾಸ ಟ್ರಸ್ಟಿನ ಸಂಯೋಜಕರಾದ ಜೀವನ್ ಕೊಲ್ಯ ಇವರು ಶಿಬಿರಾರ್ಥಿಗಳಿಗೆ ಶಿಸ್ತು, ಸಮಯ ಪಾಲನೆ, ತರಬೇತಿಯ ಪ್ರಯೋಜನ ಕುರಿತು ಮಾತನಾಡಿದರು. ಪಂಚಾಯತ್ ಅಧ್ಯಕ್ಷರಾದ ಶ್ರೀ ಸುದೀಪ್ ಕುಮಾರ್ ಶೆಟ್ಟಿ ಇವರು ಶುಭ ಹಾರೈಸಿದರು.
ತಾಲೂಕು ವ್ಯವಸ್ಥಾಪಕರಾದ ಪ್ರದೀಪ್ ಕಾಮತ್ ಅವರು ಗ್ರಾಮ ಪಂಚಾಯತ್ ಮತ್ತು ಸಂಸ್ಥೆಯಿಂದ ಸಿಗುವ ಬೆಂಬಲವನ್ನು ಸ್ಮರಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಿರಿಜಾ, ಪಂಚಾಯತ್ ಸದಸ್ಯರು, ವಲಯ ಮೇಲ್ವಿಚಾರಕಾರದ ಶ್ರೀಮತಿ ದೀಕ್ಷಿತ, ತರಬೇತಿ ಅಧ್ಯಾಪಕರಾದ ಶ್ರೀಮತಿ ಅಂಜನಾ ಪ್ರಭಾಕರ್ ಉಪಸ್ಥಿತರಿದ್ದರು. ಹಾಗೂ ಒಕ್ಕೂಟದ ಸಿಬ್ಬಂದಿಗಳು ಹಾಜರಿದ್ದರು.
ಶ್ರೀಮತಿ ಸ್ವಾತಿ ರವರು ಸ್ವಾಗತಿಸಿದರು. ಶ್ರೀಮತಿ ಅನುರಾಧ ರವರು ವಂದಿಸಿದರು. ಶ್ರೀಮತಿ ಲೈಲಾಬಿ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಒಟ್ಟು 30 ಜನ ಶಿಬಿರಾರ್ಥಿಗಳು ಹಾಜರಿದ್ದರು.




