February 1, 2026

ಕಟೀಲು: ತೆಂಗಿನಕಾಯಿ ಮರದಲ್ಲೇ ಹೃದಯಾಘಾತದಿಂದ ವ್ಯಕ್ತಿ ಸಾವು

0
image_editor_output_image220379084-1765443022694.jpg

ಕಟೀಲು: ವ್ಯಕ್ತಿಯೊಬ್ಬರು ತೆಂಗಿನಕಾಯಿ ಕೀಳಲು ಏರಿದ ಮರದಲ್ಲೇ ಮೃತಪಟ್ಟ ಘಟನೆ ಕಟೀಲು ಜಲಕದ ಕಟ್ಟೆ ಸಮೀಪ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಜಯರಾಮ ಶೆಟ್ಟಿ(75) ಎಂದು ಗುರುತಿಸಲಾಗಿದೆ. ಸುರತ್ಕಲ್‌ನ ಮುಕ್ಕದಲ್ಲಿ ವಾಸವಾಗಿರುವ ಜಯರಾಮ ಶೆಟ್ಟಿಯವರು ಬುಧವಾರ ಕಟೀಲು ಸಮೀಪದ ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ ಯಂತ್ರದ ಸಹಾಯದಿಂದ ಏರಿದ್ದಾರೆ.

ಈ ಸಂದರ್ಭ ತೆಂಗಿನ ಮರದಲ್ಲಿ ಹೃದಯಾಘಾತ ಕ್ಕೀಡಾಗಿದ್ದಾರೆ. ಆದರೆ ಈ ಸಂದರ್ಭ ಯಾರೂ ಇಲ್ಲದ ಕಾರಣ ಗಮನಕ್ಕೆ ಬಂದಿಲ್ಲ, ಸಂಜೆ ತೆಂಗಿನ ಮರದಲ್ಲಿ ವ್ಯಕ್ತಿ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳ ಮತ್ತು ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!