ಕಲ್ಲು ಎತ್ತಿ ಹಾಕಿ ಯುವಕನ ಬರ್ಬರವಾಗಿ ಕೊಲೆ
ಹಾಸನ: ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ನಂತರ ಶವದ ಮುಂದೆ ನಿಂತು ಕೊಲೆ ಮಾಡಿರುವುದಾಗಿ ಸೆಲ್ಫಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆ ಹಾಸನ ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ರಸ್ತೆಯ ಪಕ್ಕದಲ್ಲೇ ನಡಿದಿದೆ.
ಹಾಸನ ತಾಲೂಕು, ಹೂವಿನಹಳ್ಳಿ ಕಾವಲು ಗ್ರಾಮದ ಕೀರ್ತಿ ಕೊಲೆಯಾದ ಯುವಕ. ಆಲೂರು ತಾಲೂಕಿನ, ಕಣಗಾಲ್ ಗ್ರಾಮದ ಉಲ್ಲಾಸ್ ಹಾಗೂ ಇತರರು ಕೀರ್ತಿಯನ್ನು ಕೊಲೆಗೈದು ಸೆಲ್ಪಿ ವೀಡಿಯೋ ಮಾಡಿದ್ದಾರೆ. ಕೀರ್ತಿ, ಉಲ್ಲಾಸ್ ಆಟೋ ಚಾಲಕರಾಗಿದ್ದು, ಸ್ನೇಹಿತರಾಗಿದ್ದರು. ಸೋಮವಾರ ಬೆಳಗ್ಗೆ ಕೀರ್ತಿ ಮನೆಯಿಂದ ಹೋಗಿದ್ದ. ಆನಂತರದಲ್ಲಿ ಉಲ್ಲಾಸ್ ಜೊತೆ ಜಗಳವಾಗಿತ್ತು ಎನ್ನಲಾಗಿದೆ. ಬಳಿಕ ನಿರ್ಜನ ಪ್ರದೇಶಕ್ಕೆ ಹೋಗಿದ್ದ ನಾಲ್ಕೈದು ಯುವಕರು ಗಾಂಜಾ ಸೇವಿಸಿ ನಂತರ ಕೀರ್ತಿ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾರೆ.





