March 18, 2026

ಫೈನಾನ್ಸ್‌ನ 3 ಲಕ್ಷಕ್ಕೂ ಅಧಿಕ ಹಣ ಆನ್‌ಲೈನ್ ಗೇಮ್‌ಗೆ ಬಳಕೆ: ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ

0
image_editor_output_image824463349-1765180155980.jpg

ಧಾರವಾಡ: ಫೈನಾನ್ಸ್‌ಗೆ ಕಟ್ಟಬೇಕಿದ್ದ 3 ಲಕ್ಷ ರೂ.ಗೂ ಅಧಿಕ ಹಣವನ್ನು ಆನ್‌ಲೈನ್ ಗೇಮ್‌ಗೆ ಬಳಕೆ ಮಾಡಿ, ಬಳಿಕ ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಮಂಗಳಗಟ್ಟಿ ಮೂಲದ ಬಸವರಾಜ ಸಕ್ರಪ್ಪನ್ನವರ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಊರಿನಲ್ಲಿಯೇ ಫೈನಾನ್ಸ್ ಹಣವನ್ನ ಕಲೆಕ್ಷನ್ ಮಾಡುವ ಕೆಲಸ ಮಾಡುತ್ತಿದ್ದ.

ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಸಂಗ್ರಹಿಸಿದ್ದ ಫೈನಾನ್ಸ್ ಹಣವನ್ನು ಆಟಕ್ಕೆ ಬಳಸಿಕೊಂಡಿದ್ದ. ಹೀಗೆ ಬಳಸಿಕೊಂಡು 3 ಲಕ್ಷ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದ. ಫೈನಾನ್ಸ್ ಹಣವನ್ನು ವಾಪಸ್ ಕಟ್ಟಲಾಗದೇ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗರಗ (Garag) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!