ಡಿ.ಕೆ.ಶಿವಕುಮಾರ್ ಇವತ್ತೇ ಸಿಎಂ ಆಗಬೇಕು: ಮಿಥುನ್ ರೈ
ಮಂಗಳೂರು: ನನ್ನ ವೈಯಕ್ತಿಕ ಅಭಿಪ್ರಾಯ ಕೇಳಿದರೆ ಡಿಕೆಶಿ ಇವತ್ತೇ ಸಿಎಂ ಆಗಬೇಕು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಕ್ಕೆ ಬಹಳ ಶ್ರಮ ಪಟ್ಟಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಆಸೆ, ನನ್ನ ಸಂಕಲ್ಪ, ನನ್ನ ವ್ರತ ಎಲ್ಲವೂ ಇದೆ ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ನಾನು ತಾಯಿ ಮಂಗಳಾಂಬೆಯ ಭಕ್ತ. ಅವರ ಬಳಿ ನಾನು ಸಂಕಲ್ಪ ಮಾಡಿದ್ದೇನೆ. ಮುಂಬರುವ ನನ್ನ ಕಾರ್ಯಕ್ರಮದಲ್ಲಿ ಡಿಕೆಶಿ ಸಿಎಂ ಆಗಿ ಕುರ್ಚಿ ಅಲಂಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.




