ಅನಿವಾಸಿ ಕನ್ನಡಿಗರ ಒಕ್ಕೂಟ ಯು ಎ ಇ ಇದರ ಆಶ್ರಯದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರ
ದುಬೈ: ಡಿಸೇಂಬರ್ 24 ಶುಕ್ರವಾರ 2021 ಅನಿವಾಸಿ ಭಾರತೀಯರ ಆಶಾಕಿರಣವಾದ ಅನಿವಾಸಿ ಕನ್ನಡಿಗರ ಒಕ್ಕೂಟ ಯು ಎ ಇ ಆಶ್ರಯದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ಲತೀಫಾ ಆಸ್ಪತ್ರೆ ರಕ್ತನಿಧಿ ದುಬೈಯಲ್ಲಿ ನಡೆಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 113 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅನಿವಾಸಿ ಕನ್ನಡಿಗರ ಒಕ್ಕೂಟ ಇದರ ಅಧ್ಯಕ್ಷರಾದ ಶಂಸುದ್ದೀನ್ ಉಡುಪಿ , (AKO) ಸಮಿತಿ ಸದಸ್ಯರಾದ ವಾಸಿಂ ಹೊನ್ನಾಳ, ಶಾಫಿ ಬಜ್ಪೆ , ಅಲಿ ನೀರ್ಮಾರ್ಗ, ಬದ್ರು ಸುಳ್ಯ, ಉಪಸ್ಥಿತರಿದ್ದರು.
ರಕ್ತದಾನ ಶಿಬಿರದ ಉಸ್ತುವಾರಿಗಳಾಗಿ ಕೆ.ಕೆ.ಜಬ್ಬಾರ್ ಕಲ್ಲಡ್ಕ, ರಿಯಾಝ್ ಜೋಕಟ್ಟೆ ವಹಿಸಿದರು. ಅದೇ ರೀತಿ (AKO) ಇದರ ಸ್ವಯಂ ಸೇವಕರು ಶಿಸ್ತುಬದ್ಧವಾಗಿ ಎಲ್ಲರನ್ನೂ ಗೌರವಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು. ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿಗಳಿಗೆ, ರಕ್ತದಾನಿಗಳಿಗೆ, ಆಸ್ಪತ್ರೆ ಸಿಬ್ಬಂದಿವರ್ಗದವರಿಗೆ ನಿಸಾರ್ ಆಲಡ್ಕರವರು ಸ್ವಾಗತಿಸಿ ವಂದಿಸಿದರು.