ಮಣಿಪಾಲ: ಗ್ಯಾಸ್ ಸಿಲಿಂಡರ್ ಸ್ಪೋಟ: ಡೆಲ್ಲಿ ಡಾಬಾ ಹೊಟೇಲ್ ಸಂಪೂರ್ಣ ಭಸ್ಮ
ಮಣಿಪಾಲ: ಗ್ಯಾಸ್ ಸಿಲಿಂಡರ್ ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸ್ಪೋಟಗೊಂಡು ಹೊಟೇಲ್ ಒಂದು ಸಂಪೂರ್ಣ ಭಸ್ಮವಾದ ಘಟನೆ ಮಣಿಪಾಲ ಆರ್‌ಎಸ್‌ಬಿ ಸಭಾಭವನದ ಸಮೀಪ ಸಂಭವಿಸಿದೆ.
ಡೆಲ್ಲಿ ಡಾಬಾ ಎಂಬ ಹೊಟೇಲಿನ ಒಂದು ಗ್ಯಾಸ್ ಸಿಲಿಂಡರ್ ಅಕಸ್ಮಿಕವಾಗಿ ಸ್ಪೋಟಗೊಂಡಿತ್ತೆನ್ನಲಾಗಿದೆ. ಇದರಿಂದ ಹೊಟೇಲ್‌ನಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ಕ್ಷಣ ಮಾತ್ರದಲ್ಲೇ ಬೆಂಕಿ ಕೆನ್ನಾಲಿಗೆ ಇಡೀ ಹೊಟೇಲ್ ವಿಸ್ತರಿಸಿತು.
ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಇನ್ನೆರೆಡು ಗ್ಯಾಸ್ ಸಿಲಿಂಡರ್‌ಗಳು ಸ್ಪೋಟಗೊಳ್ಳದಂತೆ ತಡೆದರು ಎಂದು ತಿಳಿದುಬಂದಿದೆ. ಇದರಿಂದ ಯಾವುದೇ ಜೀವ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.




