ಉಪ್ಪಿನಂಗಡಿ: ನಿರ್ಮಾಣ ಹಂತದ ಆವರಣಗೋಡೆ ಕುಸಿತ: ಪಕ್ಕದ ಮನೆಗೆ ಹಾನಿ
ಉಪ್ಪಿನಂಗಡಿ: ಮನೆಯೊಂದರ ನಿರ್ಮಾಣ ಹಂತದ ಆವರಣಗೋಡೆ ದರೆ ಸಹಿತ ಕುಸಿದು ಬಿದ್ದ ಪರಿಣಾಮ ಪಕ್ಕದ ಮನೆಯ ಅಡುಗೆ ಕೋಣೆ ಧ್ವಂಸಗೊಂಡ ಘಟನೆ 34 ನೆಕ್ಕಿಲಾಡಿಯ ಸುಭಾಶ್ ನಗರದ ಜನತಾ ಕಾಲನಿಯಲ್ಲಿ ಸೋಮವಾರ(ನ.24) ಸಂಜೆ ನಡೆದಿದೆ.
ಆ ಮನೆಯಲ್ಲಿ ಇಲ್ಯಾಸ್ ಎಂಬುವವರು ಹೊಸದಾಗಿ ಬಂದು ನೆಲೆಸಿದ್ದರು. ಹಾಗೆಯೇ ಬಂದಿದ್ದ ಕುಟುಂಬಸ್ಥರಿಗೆ ಸಂಜೆ ಅಡುಗೆ ಕೋಣೆಯಲ್ಲಿ ಔತಣದ ತಯಾರಿ ನಡೆಯುತ್ತಿತ್ತು. ಈ ಮನೆಯ ಹಿಂಬದಿಯಲ್ಲಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಸುಶೀಲಾ ಎಂಬುವರಿಗೆ ಸೇರಿದ ಮನೆಗೆ ಸುಮಾರು 10 ದಿನಗಳಿಂದ ಆವರಣಗೋಡೆ ಕಟ್ಟುವ ಕೆಲಸಗಳು ನಡೆಯುತ್ತಿತ್ತು.
ನ.24ರಂದು ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಆವರಣ ಗೋಡೆ ಕುಸಿಯುವುದನ್ನು ಕಂಡ ಮೇಸ್ತ್ರಿ ಬೊಬ್ಬೆ ಹಾಕಿ ಕೆಳಗಿನ ಮನೆಯವರಿಗೆ ಹೊರಗೆ ಓಡುವಂತೆ ಎಚ್ಚರಿಸಿದ್ದಾರೆ.




