ವಿಟ್ಲ: ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕೋತ್ಸವ-ಜೇಸಿ ಕಲರವ
ವಿಟ್ಲ: ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಜೇಸೀಸ್ ಪೆವಿಲಿಯನ್ ನಲ್ಲಿ ವಾರ್ಷಿಕ ದಿನಾಚರಣೆ ಜೇಸಿ ಕಲರವ 2025 ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಎಸ್. ಪಿ. ಎಲ್. ಮೋನಿಶ್ ಎಲ್. ಮಾತನಾಡಿ ಬದುಕಿನಲ್ಲಿ ಬರುವ ಪ್ರತಿಯೊಂದು ಸವಾಲುಗಳನ್ನು ಎದುರಿಸಬೇಕು. ಬದಲಾವಣೆ ಶಾಲಾ ಕೊಠಡಿಯಿಂದಲೇ ಆರಂಭವಾಗಬೇಕು ಎಂದು ತಿಳಿಸಿದರು.

ವಿವಿಧ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಶಾಲಾ ವಾರ್ಷಿಕ ಚಟುವಟಿಕೆಯ “ವಿಷನ್” ಪುಸ್ತಕ ಬಿಡುಗಡೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕೆ. ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಸಮೀಕ್ಷಾ ಆಳ್ವ, ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಶಾಂಕ್ ಪ್ರಭು ಭಾಗವಹಿಸಿದರು.



ವಿದ್ಯಾರ್ಥಿಗಳಾದ ದಿಶಾ ಬಿ. ಸ್ವಾಗತಿಸಿದರು. ಪ್ರಾಂಶುಪಾಲ ಜಯರಾಮ ರೈ ವರದಿ ವಾಚಿಸಿದರು. ಚೈತನ್ಯ ಕೃಷ್ಣ ವಂದಿಸಿದರು. ನವ್ಯ ಕಾರ್ಯಕ್ರಮ ನಿರೂಪಿಸಿದರು.





