March 18, 2026

ಬಿ.ಸಿ ರೋಡ್: ಬಸ್ ನಿಲ್ದಾಣದ ಬಳಿ  ಪತಿಗೆ ಚೂರಿಯಿಂದ ಇರಿದ ಪತ್ನಿ

0
image_editor_output_image-1176656121-1763565832646

ಬಂಟ್ವಾಳ: ಟೆಕ್ಸ್ ಟೈಲ್ಸ್ ಮಾಲಿಕನಿಗೆ ಪತ್ನಿಯೇ ಚೂರಿಯಿಂದ ಇರಿದಿರುವ ಘಟನೆ ಬಿ.ಸಿ.ರೋಡ್ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ಬಳಿ ನಡೆದಿದೆ.

ಪತಿ ಕೃಷ್ಣ ಪ್ರಸಾದ್ ಗಾಯಗೊಂಡಿದ್ದು, ಪತ್ನಿಯನ್ನು ಬಂಧಿಸಲಾಗಿದೆ.

ಹಲವು ದಿನಗಳಿಂದ ಪತಿ ಹತ್ಯೆಗೆ ಕಾದು ಕುಳಿತಿದ್ದ ಪತ್ನಿ ಜ್ಯೋತಿ ಕಾದುಕುಳಿತಿದ್ದಳು ಎಂದು ತಿಳಿದು ಬಂದಿದೆ.

ಬಿ.ಸಿ ರೋಡಿನ ಸೋಮಯಾಜಿ ಟೆಕ್ಸ್ ಟೈಲ್ ಅಂಗಡಿಗೆ ನುಗ್ಗಿದ ಅವರು ಕ್ಯಾಶ್ ಕೌಂಟರ್ ನಲ್ಲಿ ಕುಳಿತ್ತಿದ್ದ ಗಂಡನಿಗೆ ಬುರ್ಖಾ ದರಿಸಿಕೊಂಡು ಬಂದ ಪತ್ನಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡ ಕೃಷ್ಣ ಸೋಮಯಾಜಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿತೆ ಜ್ಯೋತಿ ಸೋಮಯಾಜಿ ಅವರನ್ಬು ಬಂಟ್ವಾಳ ಪೋಲೀಸರು ಕ್ಷಣಾರ್ಧದಲ್ಲಿ ಬಂಧಿಸಿದ್ದಾರೆ.

ಬಂಟ್ವಾಳ ನಗರ ಪೋಲೀಸರು ಸ್ಥಳದಲ್ಲಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಕೌಟುಂಬಿಕ ಕಲಹದ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಕೌಟುಂಬಿಕ ವಿಚಾರಕ್ಕೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಮೆಟ್ಟಿಲು ಕೂಡ ಏರಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!