February 1, 2026

ಉಡುಪಿ: ಪ್ರಚೋದನಕಾರಿ ಭಾಷಣ ಆರೋಪ: ಹಿಂಜಾವೇ ಮುಖಂಡ ರತ್ನಾಕರ ಅಮೀನ್‌ ಬಂಧನ

0
image_editor_output_image-1232071274-1763551184843.jpg

ಉಡುಪಿ: ದೆಹಲಿ ಬಾಂಬ್ ಸ್ಪೋಟ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಮೇಲೆ ಹಿಂದೂ ಸಂಘಟನೆಯ ಮುಖಂಡ ಅಜೆಕಾರ್ ನಿವಾಸಿ ರತ್ನಾಕರ್ ಅಮೀನ್ (49) ಅವರನ್ನು ಅರೆಸ್ಟ್ ಮಾಡಲಾಗಿದೆ.

ನವೆಂಬರ್ 15ರಂದು ನಗರದ ಜಟ್ಕಾ ನಿಲ್ದಾಣದ ಬಳಿ ಹಿಂದೂ ಜಾಗರಣ ವೇದಿಕೆ ಉಡುಪಿ ತಾಲೂಕು ವತಿಯಿಂದ ಹೊಸದಿಲ್ಲಿ ಬಾಂಬ್‌ ಸ್ಫೋಟದ ಕುರಿತು ಇಸ್ಲಾಮಿಕ್‌ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಅವರು ಧರ್ಮಗಳ ನಡುವೆ ದ್ವೇಷ ಉಂಟು ಮಾಡುವ ರೀತಿ ಭಾಷಣ ಮಾಡಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.

ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು. ನವೆಂಬರ್ 18ರಂದು ನಗರ ಠಾಣೆಯ ಪೊಲೀಸ್‌ ನಿರೀಕ್ಷಕ ಮಂಜುನಾಥ್‌ ವಿ. ಬಡಿಗೇರ ನೇತೃತ್ವದ ವಿಶೇಷ ತಂಡವು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

Leave a Reply

Your email address will not be published. Required fields are marked *

error: Content is protected !!