March 18, 2026

ತೆಂಗಿನ ಮರದಲ್ಲಿ ಕಾಯಿ ಕೀಳುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

0
image_editor_output_image-206183903-1763520947846.jpg

ಮೈಸೂರು : ತೆಂಗಿನ ಮರದಲ್ಲಿ ಕಾಯಿ ಕೀಳುವಾಗ ಆಯತಪ್ಪಿ ಮರದಿಂದ ಕೆಳಕ್ಕೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸಾವಿಗೀಡಾಗಿರುವ ಘಟನೆ ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಣಸನಾಳು ಗ್ರಾಮದ ಲಿಂಗರಾಜು(38) ಮೃತರು.

ಮಂಗಳವಾರ ಬೆಳಿಗ್ಗೆ ಹುಲ್ಲಹಳ್ಳಿ ರೈತರೊಬ್ಬರಿಗೆ ಸೇರಿದ ತೆಂಗಿನ ತೋಟಕ್ಕೆ ತಾಲೂಕಿನ ಹುಣಸನಾಳು ಗ್ರಾಮದ 5 ಮಂದಿ ಕಾಯಿ ಕೀಳಲು ಆಗಮಿಸಿದ್ದರು. ಹುಲ್ಲಹಳ್ಳಿ ಗ್ರಾಮದ ವ್ಯಕ್ತಿ ಒಬ್ಬರು ತೆಂಗಿನ ಕಾಯಿ ಕೀಳುವ ಗುತ್ತಿಗೆಯನ್ನು ಪಡೆದಿದ್ದರು ಎನ್ನಲಾಗಿದೆ.

ಹುಣಸನಾಳು ಗ್ರಾಮದ ಕೂಲಿ ಕಾರ್ಮಿಕ ಲಿಂಗರಾಜು ಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!