March 18, 2026

ಕಾರು ರಿವರ್ಸ್ ತೆಗೆಯುವಾಗ ಢಿಕ್ಕಿ ಹೊಡೆದು ಮಗು ಸಾವು

0
image_editor_output_image577348234-1763285053945.jpg

ನೆಲಮಂಗಲ: ಕಾರು ರಿವರ್ಸ್ ತೆಗೆಯುವ ಸಂದರ್ಭ ಮಗುವಿನ ಮೇಲೆ ಹರಿದು ಮಗು ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ತೋಟದ ಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ನಡೆದಿದೆ.

ಒಂದೂವರೆ ವರ್ಷದ ನೂತನ್ ಎಂಬ ಮಗು ಕಾರು ಚಕ್ರದಡಿಗೆ ಸಿಲುಕಿ ಮೃತಪಟ್ಟಿದೆ. ಮೋಹನ್ ಅಕ್ಕ ದೇವಿಕಾ ಹಾಗೂ ಭಾವ ಮುನೇಶ್ ಶನಿವಾರ ಬೆಳಗ್ಗೆ ಮೋಹನ್ ಅವರ ಮನೆಗೆ ಬಂದಿದ್ದರು. ಮನೆಯಿಂದ ಹೊರಟು ಕಾರನ್ನು ರಿವರ್ಸ್ ತೆಗೆಯುವ ವೇಳೆ ದುರ್ಘಟನೆ ಸಂಭವಿಸಿದೆ.

ರಸ್ತೆ ಪಕ್ಕದಲ್ಲಿ ಆಟವಾಡುತ್ತಿದ್ದ ಮಗವನ್ನು ಗಮನಿಸದೇ ಕಾರು ಚಲಾಯಿಸಿದ ಪರಿಣಾಮ ಮಗು ಸ್ಥಳದಲ್ಲೆ ಮೃತಪಟ್ಟಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್‌ಎಸ್ 106 (ಅಜಾಗರೂಕತೆಯಿಂದ ಸಾವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!