March 18, 2026

ಶಿವಮೊಗ್ಗ: ಮನೆ ಬಳಿಯ ಮರಕ್ಕೆ ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

0
image_editor_output_image-1167991744-1763278059798.jpg

ಶಿವಮೊಗ್ಗ: ಯುವತಿಯೊಬ್ಬಳು ಮನೆ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ಬಚ್ಚನಕೂಡಿಗೆಯಲ್ಲಿ ನಡೆದಿದೆ.

ಬಚ್ಚನಕುಡಿಗೆಯ ರಮೇಶ್ ಆಚಾರ್ ಅವರ ಪುತ್ರಿ ಪ್ರಾಪ್ತಿ (21) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ತಿಳಿದು ಬಂದಿದೆ. ಆಕೆ ತೀರ್ಥಹಳ್ಳಿಯ ಬಾಳೆಬಯಲು ಸರ್ಕಾರಿ ಕಾಲೇಜಿನ ತೃತೀಯ ಬಿಬಿಎ ವ್ಯಾಸಾಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!