ಪುತ್ತೂರು: ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆ ಎಲ್ ವಿ ಬುಕ್ ಹೌಸ್ ನೆಹರೂ ನಗರದಲ್ಲಿ ಶುಭಾರಂಭ
ಪುತ್ತೂರು: ಪುಸ್ತಕ ಮತ್ತು ಶೈಕ್ಷಣಿಕ ಸಾಮಗ್ರಿಗಳ ಕ್ಷೇತದಲ್ಲಿ ತನ್ನದೇ ಆದ ಬ್ರಾಂಡ್ ಕ್ರಿಯೇಟ್ ಮಾಡಿ ಮುನ್ನುಗ್ಗುತ್ತಿರುವ ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆಯ ನೂತನ ಸಂಸ್ಥೆ ಎಸ್ ಎಲ್ ವಿ ಬುಕ್ ಹೌಸ್ ಇಂದು ಪುತ್ತೂರಿನ ನೆಹರೂ ನಗರದ ಕಾಲೇಜ್ ಗೇಟ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಬೆಂಗಳೂರು, ಮೈಸೂರು ಶಿವಮೊಗ್ಗ, ಚಾಮರಾಜನಗರ, ಮೂಡಬಿದ್ರೆ, , ಮಂಗಳೂರಿನ ಬಿಜೈ, ಮಾರ್ನಮಿ ಕಟ್ಟೆ, ಮೇರಿಹಿಲ್ ಮತ್ತು ಕೊಡಿಯಾಲ್ ಬೈಲ್ ಸೇರಿದಂತೆ ರಾಜ್ಯದ್ಯಂತ ಹಲವು ಶಾಖೆಗಳನ್ನು ತೆರೆಯುವ ಮೂಲಕ ಕರ್ನಾಟಕದಲ್ಲಿ ಅತೀ ದೊಡ್ಡ ಪುಸ್ತಕ ಮಳಿಗೆಯಾಗಿ ಇಂದು ಬೆಳೆದು ನಿಂತಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವಸಂತ್ ಕೆದಿಲಾಯ, ಇವರ ನೇತೃತ್ವದಲ್ಲಿ ಲಕ್ಷ್ಮೀ ಪೂಜೆ ನಡೆಯಿತು.
ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರು ವೆಂಕಟರಮಣ ಅಸ್ರಣ್ಣರವರು ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಶ್ರೀಮತಿ ಚೆನ್ನಮ್ಮ ಮದನ ಗೌಡ ಮೊದಲ ಖರೀದಯ ಮೂಲಕ ಎಸ್ ಎಲ್ ವಿ ಸಂಸ್ಥೆಗೆ ಚಾಲನೆ ನೀಡಿದರು.
ಪುತ್ತೂರು ಶಾಸಕರು ಅಶೋಕ್ ಕುಮಾರ್ ರೈ ರಿಬ್ಬನ್ ಕತ್ತರಿಸಿ ನೂತನ ಸಂಸ್ಥೆ ಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ನೂತನ ಸಂಸ್ಥೆಯ ಉದ್ಘಾಟನ ಸಮಾರಂಭದಲ್ಲಿ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರು ಎಸ್ ಆರ್ ರಂಗಮೂರ್ತಿ, ವಿಧಾನ ಪರಿಷತ್ ಸದಸ್ಯರು ಕಿಶೋರ್ ಕುಮಾರ್ ಪುತ್ತೂರು, ಡಾ. ಸುರೇಶ್ ಪುತ್ತೂರಾಯ,
ಮಾಜಿ ಶಾಸಕರು ಸಂಜೀವ ಮಠಂದೂರು, ಮೌರ್ಯ ರೇಣುಕಾ ಪ್ರಸಾದ್, ಹಿರಿಯ ವೈದ್ಯರಾದ ಡಾ. ಪ್ರಸಾದ್ ಭಂಡಾರಿ, ದಯಾನಂದ ಶೆಟ್ಟಿ ಉಜಿರೆ ಮಾರ್, ಅರುಣ್ ಕುಮಾರ್ ಪುತ್ತಿಲ, ರಾಜರಾಮ್ ಶೆಟ್ಟಿ ಕೋಲ್ಪೆ ಗುತ್ತು, ಸುಧಾನ ವಸತಿ ಶಾಲೆಯ ಫಾ. ವಿಜಯ ಹಾರ್ವಿನ್, ಎಂ ಪಿ ಎಂ ಸ್ಕೂಲ್ ನ ಅಧ್ಯಕ್ಷರು ಎಂ ಪಿ ಅಬುಬಕ್ಕರ್, ಸುಧಾಕರ್ ಶೆಟ್ಟಿ ಬೀಡಿನಮಜಲು, ಶ್ರೀಮತಿ ಭವಾನಿ ಟೀಚರ್ ಕೊಲ್ಯ, ಪಂಜಿಗುಡ್ಡೆ ಈಶ್ವರ್ ಭಟ್, ನ್ಯಾಯವಾದಿ ಮಹೇಶ್ ಕಜೆ, ಮುರಳಿ ಕೃಷ್ಣ ಹಸಂತಡ್ಕ, ರಶೀದ್ ವಿಟ್ಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪುತ್ತೂರಿನ ಮಳಿಗೆಯನ್ನು ಆರಂಭಿಸುವಲ್ಲಿ ವಿಶೇಷ ಮತುವರ್ಜಿ ವಹಿಸಿ, ಎಸ್ ಎಲ್ ವಿ ಸಂಸ್ಥೆಯ ಪ್ರತೀ ಕಾರ್ಯಚಟುವಟಿಕೆಯಲ್ಲಿ ಸಹಕರಿಸಿದ ದಿವಾಕರ್ ದಾಸ್ ರವರ ಬಾಲ್ಯ ಸ್ನೇಹಿತ ರಾಮ್ ದಾಸ್ ಶೆಟ್ಟಿ ವಿಟ್ಲ ಇವರನ್ನು ಎಸ್ ಎಲ್ ವಿ ಸಂಸ್ಥೆಯ ಮಾಲಕರಾದ ಶ್ರೀಮತಿ ಹೇಮಾವತಿ ದಿವಾಕರ್ ದಾಸ್ ಮತ್ತು ದಿವಾಕರ್ ದಾಸ್ ನೇರ್ಲಾಜೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಎಸ್ ಎಲ್ ವಿ ಬುಕ್ ಹೌಸ್ ನ ಪ್ರಧಾನ ವ್ಯವಸ್ಥಾಪಕರಾದ ರಾಜ ಅಂಚನ್ ಹಾಗೂ ಎಸ್ ಎಲ್ ವಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಬಳಿಕ ದಿವ್ಯನಿಧಿ ರೈ ಎರುಂಬು ಮತ್ತು ಬಳಗದವರಿಂದ ಸ್ವರ ಸಮರ್ಪಣೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಮುಖ್ಯಸ್ಥರು ಸೇಸಪ್ಪ ರೈ, ಸುಧಾನ ವಸತಿ ಶಾಲೆಯ ಮುಖ್ಯೋಪಾಧ್ಯಯರು ಶೋಭಾ, ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರು ಜಯರಾಮ್ ರೈ, ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಸಂತೋಷ್ ಕುಮಾರ್ ರೈ ಕೈಕಾರ, ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಜಯಸೂರ್ಯ ರೈ, ಅಂಬಿಕಾ ವಿದ್ಯಾಸಂಸ್ಥೆಯ ಮುಖ್ಯೋಪಾದ್ಯಾಯಿನಿ ಮಾಲತಿ ಭಟ್, ಮೌಂಟೇನ್ ವ್ಯೂಸ್ ಸ್ಕೂಲ್ ನ ಸಾಹಿಕ, ಕಂಬಳಬೆಟ್ಟು ಜನಪ್ರಿಯ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ.ಅಬ್ದುಲ್ ಬಶೀರ್ ವಿ.ಕೆ., ಸುದ್ದಿಬಿಡುಗಡೆ ಸಿಇಒ ಸೃಜನ್ ಊರುಬೈಲ್, ಕಹಳೆ ನ್ಯೂಸ್ ನ ಮುಖ್ಯಸ್ಥರಾದ ಶ್ಯಾಮಸುದರ್ಶನ್, ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್
ಸುಧಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸುಪ್ರಿತ್ ಕೆ.ಸಿ., ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾದ್ಯಾಯಿನಿ ಸವಿತ, ಅಕ್ಷಯ ಕಾಲೇಜಿನ ಮುಖ್ಯಸ್ಥರಾದ ಜಯಂತ ನಡುಬೈಲ್, ಪೋಪ್ಯುಲರ್ ಸ್ವೀಟ್ಸ್ ನ ಮಾಲಕರಾದ ನಾಗೇಂದ್ರ ಕಾಮತ್, ಬುಡಿಯಾರ್ ರಾಧಕೃಷ್ಣ ರೈ, ಕೊಂಕೋಡಿ ಪದ್ಮನಾಭ, ಕೃಷ್ಣ ಭಟ್ ಕೊಂಕೋಡಿ, ಮೋಹನ್ ಕೆ.ಎಸ್.ಉರಿಮಜಲು, ಕೆ.ಟಿ. ವೆಂಕಟೇಶ್ವರ ನೂಜಿ,
ವಿಟಿವಿ ನಿರೂಪಕಿ ವಿಜೆ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು .
ಶುಭಾರಂಭದ ಪ್ರಯುಕ್ತ ಎಸ್ ಎಲ್ ವಿ ನೂತನ ಸಂಸ್ಥೆಯಲ್ಲಿ ಶುಭಾರಂಭದ ಪ್ರಯುಕ್ತ ಎಲ್ಲಾ ಗ್ರಾಹಕರ ಖರೀದಿ ಯಲ್ಲಿ 40 % ವರೆಗೂ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಶುಭಾರಂಭದ ಮೊದಲ ದಿನವೇ ಗ್ರಾಹಕರು ತುಂಬಿ ತುಳುಕಿದ್ದು ಪುತ್ತೂರು ಸೇರಿದಂತೆ ಎಲ್ಲಾ ಗ್ರಾಹಕರು ಭರ್ಜರಿ ಸಾಥ್ ನೀಡಿದರು.
ಉದ್ಯಮಿ ದಿವಾಕರ್ ದಾಸ್ ನೇರ್ಲಾಜೆ ಮಾಲಕತ್ವದ ಎಸ್ ಎಲ್ ವಿ ಬುಕ್ ಹೌಸ್ ಮಳಿಗೆಯಲ್ಲಿ ಶಾಲಾ ಮಕ್ಕಳಿಗೆ ಬೇಕಾಗುವ ಎಲ್ಲಾ ಪುಸ್ತಕಗಳು, ಸ್ಟೇಷನರಿಗಳು, ಗಿಫ್ಟ್ ಐಟಂಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಕ್ಯಾರೆಮ್ ಬೋರ್ಡ್, ಚೆಸ್ ಸೇರಿದಂತೆ ಆಟದ ಸಾಮಾಗ್ರಿಗಳು, ಯೋಗ ಮ್ಯಾಟ್‌ಗಳು ಲಭ್ಯವಿದೆ.





