March 18, 2026

ಕಜ್ಜಾಯ ಕೊಡೋದಾಗಿ ಮನೆಗೆ ಕರೆದು ಅಜ್ಜಿಯ ಕೊಲೆ

0
image_editor_output_image317500241-1762773849155.jpg

ಬೆಂಗಳೂರು: ಪಕ್ಕದ ಮನೆಯ ಅಜ್ಜಿಯ ಕುತ್ತಿಗೆಯಲ್ಲಿದ್ದ ಚಿನ್ನಕ್ಕಾಗಿ ಅಜ್ಜಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ.

ದೀಪಾವಳಿ ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ ಎಂದು ಅಜ್ಜಿಯೊಬ್ಬರನ್ನು ಕರೆದ ಅದೇ ಊರಿನ ಮಹಿಳೆ, ಅಜ್ಜಿ ಬಳಿ ಇರುವ ಚಿನ್ನಕ್ಕಾಗಿ ಆಕೆಯನ್ನೇ ಕೊಂದು ಕೆರೆಗೆ ಎಸೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಬಳಿ ನಡೆದಿದೆ. 68 ವರ್ಷದ ಭದ್ರಮ್ಮ ಮೃತ ದುರ್ದೈವಿ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕೆರೆಗೆ ಎಸೆದಿದ್ದಾರೆ. ಕೊಲೆ ಮಾಡಿರುವ ಚಾಲಾಕಿ ಕಿಲ್ಲರ್ ದೀಪ ಸಿಕ್ಕಿಬಿದ್ದಿದ್ದಾಳೆ.

ಕೂಗೂರಿನ ಭದ್ರಮ್ಮ ಜೊತೆ ಇದೇ ಗ್ರಾಮದ ನಿವಾಸಿಯಾದ ದೀಪಾ ಆತ್ಮೀಯಳಾಗಿದ್ಲು. ಆದರೆ ಅದಾಗಲೇ ವೃದ್ಧೆಯ ಮೇಲೆ ದೀಪಾಳ ಕೆಟ್ಟ ಕಣ್ಣು ಬಿದ್ದಿತ್ತು. ಅಂದಾಗೆ ಅಕ್ಟೋಬರ್ 30ರ ಮಧ್ಯಾಹ್ನದಿಂದ ವೃದ್ಧೆ ಭದ್ರಮ್ಮ ಕಾಣೆಯಾಗಿದ್ರು. ಎಲ್ಲೆಡೆ ಹುಡುಕಿದ್ರೂ ಪತ್ತೆಯಾಗಿರಲಿಲ್ಲ. ಹಾಗಾಗಿ ವೃದ್ಧೆಯ ಕುಟುಂಬಸ್ಥರು ಮರುದಿನ ಸರ್ಜಾಪುರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!