March 18, 2026

ಮಣಿಪಾಲ: ಬಾರ್ ಬಳಿ ದೊಡೆದಾಟ ಪ್ರಕರಣ: ನಾಲ್ವರ ಬಂಧನ

0
image_editor_output_image-980807491-1762773629564.jpg

ಉಡುಪಿ: ಬಾರ್ ನಲ್ಲಿ ಊಟ ಮಾಡುವ ವೇಳೆ ಮೈಗೆ ಕೈ ತಾಗಿದ್ದ ವಿಚಾರಕ್ಕೆ ಗುಂಪೊಂದು ರಸ್ತೆ ಬದಿಯಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೆ ಪೊಲೀಸರು ನಾಲ್ವರನ್ನುಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಅಮರ್‌ ಶೆಟ್ಟಿ, ಚಂದನ್‌ , ಧನುಷ್‌, ಅಜಯ್‌ ಎಂದು ಗುರುತಿಸಲಾಗಿದೆ. ನವೆಂಬರ್ 08 ರಂದು ಮಣಿಪಾಲದ ಈಶ್ವರ ನಗರದಲ್ಲಿರುವ Dee Tee ಬಾರ್‌ & ರೆಸ್ಟೋರೆಂಟ್‌ ನಲ್ಲಿ ಅಮರ್‌ ಶೆಟ್ಟಿ, ಧನುಷ್‌, ನಿತೇಶ್‌, ಸುಜನ್‌, ನಿನಾದ್‌ ಅಜಯ್‌ ಎನ್ನುವವರು ಊಟ ಮಾಡುತ್ತಿದ್ದರು, ಈ ವೇಳೆ ಚಂದನ್‌ ಎಂಬಾತನ ಕೈ ಅಮರ್‌ ಶೆಟ್ಟಿಯ ಮೈಗೆ ತಾಗಿದ ವಿಚಾರದಲ್ಲಿ ಇವರಲ್ಲಿ ಮಾತಿನ ಚಕಮಕಿ ನಡೆದಿದೆ.

ಬಳಿಕ ಬಾರ್ ನಿಂದ ಹೊರಬಂದವರು ರಸ್ತೆಯಲ್ಲೇ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡು ಬೈದಾಡಿಕೊಂಡಿದ್ದು, ಇದರ ಗಲಾಟೆಯ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!