ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಝೋಹ್ರಾನ್ ಮಮ್ದಾನಿ ಆಯ್ಕೆ
ನ್ಯೂಯಾರ್ಕ್: ಝೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ಮೇಯರ್ ರೇಸ್ ನಲ್ಲಿ ಹೆಗ್ಗುರುತಿನ ಗೆಲುವು ಸಾಧಿಸಿ ನೂತನ ಮೇಯರ್ ಆಗಿ ಹೊರಹೊಮ್ಮಿದ್ದಾರೆ.
ಆಂಡ್ರ್ಯೂ ಕ್ಯುಮೊ ಮತ್ತು ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ನಗರದ ಹೊಸ ನಾಯಕರಾಗಿದ್ದಾರೆ. ಅಮೆರಿಕದ ಅತಿದೊಡ್ಡ ನಗರದಲ್ಲಿ ಉನ್ನತ ರಾಜಕೀಯ ಹುದ್ದೆಯನ್ನು ಅಲಂಕರಿಸುವ ಅಭ್ಯರ್ಥಿಯಾಗಿ ಭಾರತೀಯ ಮೂಲದ ಝೋಹ್ರಾನ್ ಮಮ್ದಾನಿ ಇದೀಗ ಹೊರಹೊಮ್ಮಿದ್ದಾರೆ.
80 ಲಕ್ಷ ಜನಸಂಖ್ಯೆಯ ನ್ಯೂಯಾರ್ಕ್ ನಗರ ನ್ಯೂಯಾರ್ಕ್ ಡೆಮೊಕ್ರಾಟರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟ ನಗರ. ತಳಮಟ್ಟದಲ್ಲಿ ಸಾವಿರಾರು ಕಾರ್ಯಕರ್ತರ ಜಾಲವನ್ನೇ ಕಟ್ಟಿ ನಿಲ್ಲಿಸಿರುವ ಝೋಹ್ರಾನ್ ತನ್ನ ವಿಭಿನ್ನ ಪ್ರಚಾರ ತಂತ್ರದ ಮೂಲಕ ಜನರ ಗಮನ ಸೆಳೆದಿದ್ದರು.




