ಟಿಪ್ಪರ್, ಇನ್ನೋವಾ ಕಾರಿನ ನಡುವೆ ಅಪಘಾತ: ಕಾರು ಚಾಲಕ ಸಜೀವ ದಹನ
ಮಂಡ್ಯ: ಟಿಪ್ಪರ್ ಹಾಗೂ ಇನ್ನೋವಾ ಕಾರಿನ ನಡುವೆ ಡಿಕ್ಕಿಯಾಗಿ, ಕಾರು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ.
ಹುಣಸೂರು ಮೂಲದ ಚಂದ್ರಶೇಖರ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಬುಧವಾರ (ಅ.29) ತಡರಾತ್ರಿ ಈ ಘಟನೆ ನಡೆದಿದೆ. ಹುಣಸೂರು ಕಡೆಗೆ ಹೋಗುತ್ತಿದ್ದ ಕಾರು, ಶ್ರೀರಂಗಪಟ್ಟಣ ಕಡೆಗೆ ಬರುತ್ತಿದ್ದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿತ್ತು. ತಕ್ಷಣ ಕಾರು ಹೊತ್ತಿ ಉರಿದಿತ್ತು. ಕಾರಿನಿಂದ ಹೊರಬರಲಾರದೆ ಚಾಲಕ ಸಾವನ್ನಪ್ಪಿದೆ.




