February 3, 2026

ವಿಮಾನದಲ್ಲಿ ತುಳು ಭಾಷೆಯಲ್ಲಿ ಪ್ರಯಾಣಕ್ಕೆ ಶುಭ ಕೋರಿದ ಪೈಲಟ್

0
n3446455461640485856013ce7cb79e2765dcdd897e193384bf6a93fb76c374374baa516bd2eb602170b14c.jpg

ಮಂಗಳೂರು: ಮಹಾರಾಷ್ಟ್ರದ ಮುಂಬೈ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ತುಳು ಭಾಷೆಯಲ್ಲಿ ಸೂಚನೆ ಕೊಡಲಾಗಿದೆ. ಡಿಸೆಂಬರ್ 24 ರಂದು ಮುಂಬೈನಿಂದ ಮಂಗಳೂರಿಗೆ ಹೊರಟ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಹೀಗೆ ತುಳು ಭಾಷೆಯ ಘೋಷಣೆ ಕೇಳಿ ಸಿಕ್ಕಿದೆ. ಉಡುಪಿ ಮೂಲದ ಪ್ರದೀಪ್ ಕುಮಾರ್ ಪದ್ಮಶಾಲಿ ಎಂಬ ಪೈಲೆಟ್ ತುಳು ಭಾಷೆಯಲ್ಲಿ ಪ್ರಯಾಣಕ್ಕೆ ಶುಭಾಶಯ ಕೋರಿದ್ದಾರೆ.

ನಮ್ಮ ಇತ್ತೆ ಪಿದಾಡ್ಯರ ತಯಾರಾವೊಂದು ಉಲ್ಲ, ಮುಂಬೈಡ್ದ್ ಟೇಕ್ ಆಫ್ ಆದ್ ಸರಿಸುಮಾರ್ ಒಂಜಿ ಘಂಟೆ ಐದು ನಿಮಿಷ ಪ್ರಯಾಣ ಮಾನ್ಪುನ ಅಂದಾಜ್ ಉಂಡು. ದಯ ಮಾಲ್ತ್ದ್ ಮಾತೆರ್ಲ ಆರಾಮಡ್ ಇತ್ತೋಂದು ಈ ವಿಮಾನ ಪ್ರಯಾಣದ ಖುಷಿನ್ ಅನುಭವಿಸ್ಲೆ ಅಂಚ ಎಂಕ್ಲ್ನ ಆಸೆ. ಇನಿ ಎಂಕ್ಲ್ನ ಒಟ್ಟುಡು ಪ್ರಯಾಣ ಮಾಲ್ಪರೆ ಮನಸ್ ಮಾಲ್ತಿನಯ್ಕಾದ್ ನಿಕ್ಲೆಗ್ ಮಾತೆರೆಗ್ಲ ಎಂಕ್ಲ್ನ ಉಡುಲ್ ದಿಂಜಿದ್ ಸೊಲ್ಮೆಲು.(ನಾವು ಈಗ ಹೊರಡಲು ತಯಾರಾಗಿದ್ದೇವೆ, ಮುಂಬೈಯಿಂದ ಟೇಕ್ ಆಫ್ ಆಗಿ ಸರಿಸುಮಾರು ಒಂದು ಘಂಟೆ ಐದು ನಿಮಿಷ ಪ್ರಯಾಣ ಮಾಡುವ ಅಂದಾಜು ಉಂಟು. ದಯವಿಟ್ಟು ಎಲ್ಲರೂ ಆರಾಮದಲ್ಲಿ ಇದ್ದುಕೊಂಡು ಪ್ರಯಾಣದ ಖುಷಿಯನ್ನು ಅನುಭವಿಸಿ ಎಂಬುದು ನಮ್ಮ ಆಸೆ. ಇವತ್ತು ನಮ್ಮ ಜೊತೆ ಪ್ರಯಾಣ ಮಾಡಲು ಮನಸ್ಸು ಮಾಡಿದ ನಿಮಗೆ ಎಲ್ಲರಿಗೂ ನಮ್ಮ ಎದೆಯಾಂತರಾಲದ ಅಭಿನಂದನೆಗಳು) ಎಂದು ಹೇಳಿದರು.

ವಿಮಾನಗಳಲ್ಲಿ ಇಂತಹ ಸೂಚನೆ ಅಥವಾ ಅನೌನ್ಸ್ಮೆಂಟ್ಗಳನ್ನು ಮಾಡುವ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸಲಾಗುತ್ತದೆ. ಇನ್ನು ಅಂತರಾಷ್ಟ್ರೀಯ ವಿಮಾನಗಳಲ್ಲಿ ಇಂಗ್ಲೀಷ್ ಭಾಷೆ ಬಳಸಿದರೆ, ಡೊಮೆಸ್ಟಿಕ್ ವಿಮಾನಗಳಲ್ಲಿ ಇಂಗ್ಲೀಷ್ ಜೊತೆ ಹಿಂದಿ ಭಾಷೆಯನ್ನು ಬಳಸುತ್ತಾರೆ. ಆದರೆ ಪ್ರಾದೇಶಿಕ ಭಾಷೆಯನ್ನು ಬಳಸೋದು ವಿರಳವಾಗಿದ್ದು, ತುಳು ಭಾಷೆಯನ್ನು ಬಳಸಿದ್ದು ಈಗ ತುಳುವರಿಗೆ ಹೆಮ್ಮ ಪಡುವ ವಿಚಾರವಾಗಿದೆ. ಇನ್ನು ಪೈಲಟ್ ತುಳು ಜೊತೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಅನೌನ್ಸ್ಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!