ಅಬುಧಾಬಿಯಲ್ಲಿ ನಿಧನ ಹೊಂದಿದ್ದ ಕನ್ನಡಿಗ ಮಂಡ್ಯದ ಅಬೂಬಕ್ಕರ್ ಮೃತ ದೇಹವನ್ನು ಮಂಡ್ಯ, ಬೆಂಗಳೂರಿಗೆ ಕಳುಹಿಸಿಕೊಟ್ಟ SKSSF ಅಬುಧಾಬಿ ಕರ್ನಾಟಕ ಸಮಿತಿ
ದಿನಾಂಕ 04.10.2025 ರಂದು ಹೃದಯಾಘಾತದಿಂದ ಅಬುಧಾಬಿಯಲ್ಲಿ ಮರಣ ಹೊಂದಿದ್ದ ಮಂಡ್ಯ ಗೂಬೆಹಳ್ಳಿ ಮೂಲದ ಸಹೋದರ ಕನ್ನಡಿಗ ಅಬೂಬಕ್ಕರ್(30) ಅವರ ಮೃತ ದೇಹವನ್ನು SKSSF ಅಬುಧಾಬಿ ಕರ್ನಾಟಕ ಸಂಘಟನೆಯ ನಿರಂತರ ಪರಿಶ್ರಮದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು. ಕನ್ನಡಿಗ ಮಂಡ್ಯದ ಅಬೂಬಕ್ಕರ್ (30)ರವರು ಕೆಲವೇ ಕೆಲವು ದಿನಗಳ ಹಿಂದೆ ಊರಿಂದ ಅಬುಧಾಬಿಗೆ ಕೆಲಸಕ್ಕೆಂದು ಬಂದಿದ್ದರು, ಅಲ್ಲಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಮರಣಹೊಂದಿದ್ದರು.
ಮೃತ ಅಬೂಬಕ್ಕರ್ ಪಾರ್ಥಿವ ಶರೀರವನ್ನು ಅಬುಧಾಬಿಯಿಂದ ತಾಯಿನಾಡಿಗೆ ಕಳುಹಿಸಿಕೊಡಲು SKSSF ಅಬುಧಾಬಿ ಕರ್ನಾಟಕ ನಾಯಕರುಗಳಾದ ಬಷೀರ್ ಕೊಡ್ಲಿಪೇಟೆ, ಶಹೀರ್ ಹುದವಿ ಉಸ್ತಾದ್, ಝೈನ್ ಸಖಾಫಿ ಉಸ್ತಾದ್, ಶಾಫಿ ಹಾಜಿ ಪೆರುವಾಯಿ ಮುಂತಾದ ನಾಯಕರ ಅವಿರತ ಶ್ರಮದಿಂದ ಕನ್ನಡಿಗ ಅಬೂಬಕ್ಕರ್ ಮೃತ ಶರೀರವನ್ನು ಊರಿಗೆ ಕಳುಹಿಸಿಕೊಡಲಾಯಿತು, ಮೃತ ಅಬೂಬಕ್ಕರ್ ಕುಟುಂಬದ ಜೊತೆ SKSSF ಅಬುಧಾಬಿ ಕರ್ನಾಟಕ ತಂಡವೂ ನಿರಂತರ ಸಂಪರ್ಕ ಮಾಡಿ ಹಲವು ಮಾಹಿತಿ ಪಡೆದುಕೊಳ್ಳಲು ಸಹಕರಿಸಿದರು.
ಮೃತ ಅಬೂಬಕ್ಕರ್ ಪಾರ್ಥಿವ ಶರೀರವನ್ನು ಬೆಂಗಳೂರುನಿಂದ ಮತ್ತೆ ಮಂಡ್ಯದ ತನ್ನ ಮನೆಗೆ ರವಾನಿಸಿಕೊಡಲು SKSSF ಕರ್ನಾಟಕ ರಾಜ್ಯ ಸಮಿತಿಯು ಬೆಂಗಳೂರು SKSSF ಘಟಕದ ಸಮಿತಿ ಸದಸ್ಯರನ್ನು ಸಂಪರ್ಕ ಮಾಡಿ ಅಬೂಬಕ್ಕರ್ ಮೃತದೇಹವನ್ನು ಸಂಭಂದಿಕರ ಕೈಗೆ ಒಪ್ಪಿಸುವವರೆಗೂ ನಿರಂತರ ಸೇವೆಯನ್ನು ಮಾಡಿದರು. ಇದಕ್ಕಾಗಿ ಸಹಕರಿಸಿದ ಪ್ರತೀಯೊಬ್ಬರಿಗೂ SKSSF ಅಬುಧಾಬಿ ಕರ್ನಾಟಕ ಸಮಿತಿಯು ಕೃತಜ್ಞತೆಗಳನ್ನು ಸಲ್ಲಿಸುತ್ತದೆ.





