March 20, 2026

ಬೆಳ್ತಂಗಡಿ: ಅವಿವಾಹಿತ ನೇಣು ಬಿಗಿದು ಆತ್ಮಹತ್ಯೆ

0
image_editor_output_image1394904544-1760161403713.jpg

ಬೆಳ್ತಂಗಡಿ: ಅವಿವಾಹಿತ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ ನಡೆದಿದೆ.

ತಣ್ಣೀರುಪಂತ ಬಿಲ್ಲವ ಸಂಘದ ಸಕ್ರಿಯ ಸದಸ್ಯ, ತಣ್ಣೀರುಪಂತ ಶಾರದ ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್‌ ಕುಮಾ‌ರ್ ಅಳಕ್ಕೆ (40ವ) ಮೃತ ದುರ್ದೈವಿಯಾಗಿದ್ದಾರೆ.

ಗಾರೆ ಕೆಲಸದ ವೃತ್ತಿ ನಡೆಸುತ್ತಿದ್ದ ಸಂತೋಷ್ ಆರೋಗ್ಯದ ಸಮಸ್ಯೆಯಿಂದ ಕೆಲ ದಿನಗಳಿಂದ ಬಳಲುತಿದ್ದು, ಇದರಿಂದ ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ತಾಯಿ ಬಳಿ ಹತ್ತಿರದ ತೋಟದಿಂದ ತೆಂಗಿನಕಾಯಿ ತರಲು ಹೇಳಿದ ಸಂತೋಷ್ ಅದೇ ಸಂದರ್ಭ ಮನೆಯ ಗೋಡೆಯ ಅಡ್ಡ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!