ಏಪ್ರಿಲ್ 10ರಿಂದ 19ರ ವರೆಗೆ ಕಟ್ಟತ್ತಿಲ ಮಖಾಂ ಉರೂಸ್ ಪ್ರಯುಕ್ತ ಪ್ರಚಾರ ಸಭೆ:
ಸಾಲೆತ್ತೂರು ಗ್ರಾಮದ ಇತಿಹಾಸ ಪ್ರಸಿದ್ದ ಕಟ್ಟತ್ತಿಲ ಮಖಾಂ ಉರೂಸ್ ಮತ್ತು ಅನ್ನದಾನ2026 ಎಪ್ರಿಲ್ 19 ರಂದು ನಡೆಯಲಿದ್ದು, ಆ ಪ್ರಯುಕ್ತ ಎಪ್ರಿಲ್ 10 ರಿಂದ 19 ರ ತನಕ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಸ್ಥಳೀಯ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ AP ಉಸ್ತಾದ್ ಮತ್ತು ಸ್ಥಳೀಯ ಖತೀಬ್ ಮುಹಮ್ಮದ್ ಮದನಿ ಯವರ ನೇತ್ರತ್ವದಲ್ಲಿ ನಡೆಯಲಿದೆ ಎಂದು ಆಡಳಿತ ಕಮಿಟಿ ತಿಳಿಸಿದೆ.

ಇದರ ಪ್ರಚಾರವನ್ನು ಅಸ್ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ಮತ್ತು ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ರವರು ಪೋಸ್ಟರ್ ಬಿಡುಗಡೆ ಗೊಳಿಸುವ ಮೂಲಕ ನಡೆಸಿದರು.
ಅತಿಥಿಗಳಾಗಿ ಉಡುಪಿ ಸಹಾಯಕ ಖಾಝಿ ಮೂಳೂರು ಅಬ್ದುರ್ರಹ್ಮಾನ್ ಮದನಿ,ಅಬೂಬಕ್ಕರ್ ಮದನಿ ಕಟ್ಟತ್ತಿಲ,ಸದರ್ ಹೈದರ್ ಅಶ್ರಫಿ,ಅಲಿಮದನಿ,ಉಮರ್ ಲತೀಫಿ ಪಾಲ್ಗೊಂಡರು.ಕಾರ್ಯಕ್ರಮವನ್ನು ಖತೀಬ್ ಮುಹಮ್ಮದ್ ಮದನಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಿ.ಎ.ಹಮೀದ್ ಹಾಜಿ,ಉಪಾಧ್ಯಕ್ಷರುಗಳಾದ ಟಿಪ್ ಟಾಪ್ ಅಬ್ದುಲ್ ಖಾದರ್,ಟೆಲಿಫೋನ್ ಖಾದರ್,ಕೋಶಾಧಿಕಾರಿ ಕಾಲಮಜಲು ಇಬ್ರಾಹಿಂ ಹಾಜಿ,ಕಾರ್ಯದರ್ಶಿಗಳಾದ ಎಮ್.ಮುಹಮ್ಮದ್ ಹಾಜಿ ಮೆದು,ಇಕ್ಬಾಲ್ ಮದನಿ,ಅಬ್ದುಲ್ ಹಮೀದ್ ಕಾಲಮಜಲ್,ಮುಹಮ್ಮದ್ ಕುಂಞ ಪಾಲ್ತಾಜೆ,ಬಿ.ಎಸ್.ಸ್ವಾದಿಖ್,ಲೆಕ್ಕಪರಿಶೋದಕ ನೌಫಲ್ ಡಿ,ಮಾಜಿ ಉರೂಸ್ ಕಾರ್ಯದರ್ಶಿ ಸಿದ್ದೀಖ್ ಸ್ಟೋರ್ ಸಹಿತ ಆಡಳಿತ ಕಮಿಟಿ ಸದಸ್ಯರು ಮತ್ತು ಜಮಾಅತರು ಉಪಸ್ಥಿತರಿದ್ದರು.ಎಂದು ಪ್ರಧಾನ ಕಾರ್ಯದರ್ಶಿ ಕೆ.ಎಮ್.ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ಪತ್ರಿಕಾ ಪ್ರಕಟಣೆಗೆ ತಿಳಿಸಿದರು.




