ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ಹಾಗೂ ದೇಶದ್ರೋಹದ ಕೇಸ್ ದಾಖಲಿಸಿ:
ಗೃಹ ಸಚಿವರಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಮನವಿ
ಮಂಗಳೂರು: ರಾಜ್ಯದ ಹಲವು ಕಡೆ ಗಲಭೆ, ದೊಂಬಿ, ಕೊಲೆ, ಕೊಲೆಯತ್ನ, ನಡೆಸಿರುವಂತಹ ಹಾಗೂ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಇರುವಂತಹ ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಕೊಲೆ ಯತ್ನ ಪ್ರಕರಣದ ಆರೋಪಿಗಳ ಪರವಾಗಿ ಪ್ರತಿಭಟನೆ ಹೆಸರಿನಲ್ಲಿ ದೊಂಬಿ ನಡೆಸಿ ಪೋಲಿಸರ ಕೊಲೆಯತ್ನ ನಡೆಸಿರುವಂತಹ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಾನ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಉಪ್ಪಿನಂಗಡಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಪಿಎಫ್ಐ ಹಾಗೂ ಎಸ್ಡಿಪಿಐ ಪುಂಡರ ಮೇಲೆ ದೇಶದ್ರೋಹದ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತ್ತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್, ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ ಕುಂಜೂರುಪಂಜ, ಬಜರಂಗದಳ ಪ್ರಮುಖರಾದ ಮಿಥುನ್ ಕಲ್ಲಡ್ಕ, ಉಪ್ಪಿನಂಗಡಿ ಬಜರಂಗದಳ ಸಂಚಾಲಕ ರವಿನಂದನ್ ನೆಟ್ಟಿಬೈಲು, ಪ್ರಮುಖರಾದ ರವಿ ಇಳಂತಿಲ, ರಾಮ್ ಪ್ರಸಾದ್ ಮಯ್ಯ ಉಪಸ್ಥಿತರಿದ್ದರು.